ಗಿನ್ನೆಸ್ ಧಾಖಲೆ ಸೇರಿದ ಸಂವಿಧಾನ ಪೀಠಿಕೆಯ ವಾಚನ

ಗಿನ್ನೆಸ್ ಧಾಖಲೆ ಸೇರಿದ ಸಂವಿಧಾನ ಪೀಠಿಕೆಯ ವಾಚನ

ಬೆಂಗಳೂರು ಸೆ.15: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಭಾರತದ ಸಂವಿಧಾನ ಪೀಠಿಕೆಯನ್ನು ವಾಚನ ಮಾಡಲು ವಿಧಾನ ಸೌಧದ ಮುಂಭಾದ ಮೆಟ್ಟಿಲುಗಳ ಮೇಲೆ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಗಿನ್ನೇಸ್‌ ದಾಖಲೆ ಸೇರಿದ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಕೊಡಲಾಯಿತು.
ಈ ಸಂಧರ್ಭದಲ್ಲಿ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮವನ್ನು ಉದ್ಘಾಟಣೆಮಾಡಿ ವಾಚನಮಾಡಿ ಮಾತನಾಡಿದ ಸಿ ಎಂ ಸಿದ್ದಾರಾಮಯ್ಯ ದೇಶದ ಮತ್ತು ನಾಡಿನ ಎಲ್ಲಾ ಜನರಿಗೆ ಶುಭಕೋರಿದರು. ಇವತ್ತು ಜಗತ್ತಿನಾದ್ಯಾಂತ ಪ್ರಜಾ ಪ್ರಭುತ್ವ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಜಗತ್ತಿನ ಅನೇಕ ರಾಷ್ಟ್ರಗಳು ಪ್ರಜಾ ಪ್ರಭುತ್ವವನ್ನು ಒಪ್ಪಿಕೊಂಡಿವೆ. ಪ್ರಜಾ ಪ್ರಭುತ್ವವ್ಯವಸ್ಥೆ ಭಾರತ ದೇಶದಲ್ಲಿ ತುಂಬಾ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಇತಿಹಾಸದಲ್ಲಿ ನೋಡಲಿಕ್ಕೆ ಸಾಧ್ಯವಾಗುತ್ತದೆ.
ಸಿಂದೂ ನಾಗರಿಕತೆಯಲ್ಲಿ, ಭೌದ್ಧರ, ಬಸವಣ್ಣರ ಕಾಲದಲ್ಲಿ ಪ್ರಜಾ ಪ್ರಭುತ್ವವ್ಯವಸ್ಥೆ ಇತ್ತು ಎನ್ನುವುದನ್ನ ಇತಿಹಾಸದಲ್ಲಿ ನೋಡುತ್ತೇವೆ. ಆದ್ದರಿಂದ ಸಂವಿಧಾನ ಬರುವುದಕ್ಕಿಂದ ಮುಂಉಚಿತವಾಗಿ ದೇಶದಲ್ಲಿ ಗಣತಂತ್ರ ವ್ಯವಸ್ಥೆ ಎಂದು ಕರಿಯುತ್ತಿದ್ದರು, ನಂತರ ಜನತಂತ್ರವಾಗಿ, ಈಗ ಪ್ರಜಾಪ್ರಭುತ್ವವಾಗಿ ನೋಡುತ್ತಿದ್ದೇವೆ, ಸಂವಿಧಾನ ರಚನೆಯಾದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಅಧಿಕೃತವಾಗಿ ಜಾರಿಯಾಯಿತು. ಬಾಬಾ ಸಹೇಬ್‌ ಅಂಬೇಡ್ಕರ್‌ ರವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ 1949 ನವೆಂಬರ್ 26 ರಂದು‌ ಅಂಗೀಕಾರವಾಯಿತು. ಜನವರಿ 26, 1950ನೇ ಇಸವಿಯಲ್ಲಿ ಅಧಿಕೃತವಾಗಿ ಜಾರಿಗೆ ಬಂತು.
ಸಂವಿಧಾನ ಅಂಗೀಕರಿಸಿದ ದಿನದಂದು ಅಂಬೇಡ್ಕರ್‌ ರವರು ಸಂವಿಧಾನದ ಬಗ್ಗೆ ಮತ್ತು ಅದರ ಅಡಿಯಲ್ಲಿ ಜನರು ಬದುಕುವ ಬಗ್ಗೆ ಐತಿಹಾಸಿಕ ಭಾಷಣವನ್ನು ಮಾಡಿದ್ದಾರೆ ಅವುಗಳನ್ನೂ ಸಹ ನಾವು ನೋಡಬಹುದಾಗಿದೆ.
ಈ ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿದಾಗ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಮಾಡಿದ್ದಾರೆ. ಆಗಾಗ ಸಂವಿಧಾನ ವಿರೋಧಿಗಳು ಸಂವಿಧಾನ ನಾಶ ಮಾಡುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಂತವರ ಬಗ್ಗೆ ಹೆಚ್ಚರವಹಿಸಿ ತಡೆಯುವಂತ ಪ್ರಯತ್ನವಾಗಬೇಕು ಆಗ ಮಾತ್ರ ಸಂವಿಧಾನವನ್ನು ಉಳಿಸಲು ಸಾಧ್ಯವಾಗುವುದು ಎಂದರು.
ಗಿನ್ನೆಸ್ ದಾಖಲೆ ಸೇರಿದ ಸಂವಿಧಾನ ಪೀಠಿಕೆಯ ವಾಚನ: ಇಂದು ಬೆಳೆಗ್ಗೆ 10:00ಗಂಟೆ ಸರಿಯಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆಯ ವಾಚನ ಕಾರ್ಯಕ್ರಮದಲ್ಲಿ ಸಿ ಎಂ ಸಿದ್ದರಾಮಯ್ಯ ವಾಚನ ಮಾಡುವ ಸಂದರ್ಭದಲ್ಲಿ ವಿಶ್ವದಾದ್ಯಂತ 15ದೇಶ 51ಜಿಲ್ಲೆಗಳು ಕರ್ನಾಟಕದ ಹೊರಗಿನಿಂದ ಮತ್ತು ಒಳಗಿನಿಂದ 2ಕೋಟಿಗೂ ಹೆಚ್ಚುಜನರು ನೋಂದಣಿಯಾಗಿ ಇದರಲ್ಲಿ ಭಾಗಿಯಾಗಿ ವಾಚನ ಮಾಡಿದ್ದರಿಂದ ಗಿನ್ನೇಸ್‌ ಧಾಖಲೆ ಸೇರಿ, ಹಿತಿಹಾಸವನ್ನು ಸೃಷ್ಟಿಸಿತು. ಈ ಸಂದರ್ಭದಲ್ಲಿ ಗಿನ್ನೇಸ್‌ ದಾಖಲೆ ಸೇರಿದ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಕೊಡಲಾಯಿತು.
ಮೇಲ್ಮನೆ ಸಭಾ ಪತಿ ಬಸವರಾಜ ಹೊರಟ್ಟಿ,ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಮಾಜಕಲ್ಯಾಣ ಸಚಿವ ಡಾ.ಹೆಚ್‌.ಸಿ. ಮಹಾದೇವಪ್ಪ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ,ಪರಿಯಾಂಕ ಖರ್ಗೆ, ರಾಮಲಿಂಗಾರೆಡ್ಡಿ, ಸತೀಶ್‌ ಜಾರಕಿಹೊಳಿ, ಬಿನಾಗೇಂದ್ರ, ಶಿವರಾಜ್‌ ತಂಗಡಗಿ ಇತರರಿದ್ದರು.
ವರದಿ
ಮಂಜುನಾಥ.ಲಕ್ಕಿಮರ(ವಿಜಯನಗರ)

ಫ್ರೆಶ್ ನ್ಯೂಸ್

Latest Posts

Featured Videos