RCB vs SRH ಇಂದು ಮುಖಾಮುಖಿ

RCB vs SRH ಇಂದು ಮುಖಾಮುಖಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ 41ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ನಡೆಯಲ್ಲಿದೆ.

ಅಂದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಆರ್​ಸಿಬಿ ಐಪಿಎಲ್​ನಲ್ಲಿ 250 ಪಂದ್ಯಗಳನ್ನಾಡಿದ ಸಾಧನೆ ಮಾಡಲಿದೆ. ಈ ಮೂಲಕ ಈ ಮೈಲುಗಲ್ಲು ತಲುಪಿದ 2ನೇ ತಂಡ ಎನಿಸಿಕೊಳ್ಳಲಿದೆ.

ತನ್ನ ಬೌಲಿಂಗ್‌ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿರುವ ಆರ್‌ಸಿಬಿ, ಗೆಲ್ಲುವುದಾದರೆ ಬ್ಯಾಟಿಂಗ್‌ ಬಲದಿಂದಲೇ ಗೆಲ್ಲಬೇಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಬೃಹತ್‌ ಗುರಿಗಳನ್ನು ಬೆನ್ನತ್ತುವಾಗ ಆರ್‌ಸಿಬಿ, ನಿರ್ಭೀತವಾಗಿ ಬ್ಯಾಟ್‌ ಬೀಸಿದೆ. ಸನ್‌ರೈಸರ್ಸ್‌ ವಿರುದ್ಧ 288 ರನ್‌ ಗುರಿ ಬೆನ್ನತ್ತುವಾಗ 262 ರನ್‌ ಸಿಡಿಸಿದ್ದ ಆರ್‌ಸಿಬಿ, ಕಳೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ 223 ರನ್‌ ಗುರಿ ಬೆನ್ನತ್ತಿ ಕೇವಲ 1 ರನ್‌ನಿಂದ ಸೋತಿತ್ತು. ಈ ಪಂದ್ಯದಲ್ಲೂ ಆರ್‌ಸಿಬಿ ತನ್ನ ಬ್ಯಾಟರ್‌ಗಳನ್ನೇ ನೆಚ್ಚಿಕೊಂಡಿದೆ.

ಗಾಯದ ಸಮಸ್ಯೆಯಿಂದಾಗಿ ಕೆಲ ಪಂದ್ಯಗಳನ್ನು ಆಡದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಆಗ ಕ್ಯಾಮರೂನ್‌ ಗ್ರೀನ್‌ ಹೊರಗುಳಿಯಬೇಕಾಗಬಹುದು. ವಿಲ್‌ ಜ್ಯಾಕ್ಸ್‌ ತಮ್ಮ ಅಸಲಿ ಸಾಮರ್ಥ್ಯ ಪ್ರದರ್ಶಿಸಲು ಶುರು ಮಾಡಿದ್ದು, ಆರ್‌ಸಿಬಿಯ ಭವಿಷ್ಯದ ತಾರೆಯಾಗುವ ಭರವಸೆ ಮೂಡಿಸಿದ್ದಾರೆ.

ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಐಪಿಎಲ್​ನಲ್ಲಿ 250 ಪಂದ್ಯಗಳನ್ನಾಡಿ ಇತಿಹಾಸ ನಿರ್ಮಿಸಿದೆ. ಈವರೆಗೆ 255 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 141 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 110 ಪಂದ್ಯಗಳಲ್ಲಿ ಸೋಲನುಭವಿಸಿದರೆ, 4 ಪಂದ್ಯಗಳು ಫಲಿತಾಂಶರಹಿತವಾಗಿತ್ತು.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನಲ್ಲಿ 250ನೇ ಪಂದ್ಯವಾಡಲು ಸಜ್ಜಾಗಿದೆ. ಈವರೆಗೆ 249 ಪಂದ್ಯಗಳನ್ನಾಡಿರುವ ಆರ್​ಸಿಬಿ 115 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 127 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು 7 ಪಂದ್ಯಗಳು ಫಲಿತಾಂಶರಹಿವಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos