ಬೆಂಗಳೂರು: ವುಮೆನ್ ಪ್ರೀಮಿಯರ್ ಲೀಗ್ನ ಪ್ರತಿಯೊಂದು ಪಂದ್ಯಗಳು ರೋಚಕತ್ತೆಯಿಂದ ಸಾಗಿದ್ದು ಒಳ್ಳೆಯ ಮನರಂಜನೆ ನೀಡುತ್ತಿದೆ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಹೆಸರುವಾಸಿಯಾಗಿದ್ದು ಇತ್ತೀಚಿನ ಪಂದ್ಯಗಳಲ್ಲಿ ಬೌಲರ್ ಗಳ ಗಮನ ಸೆರೆಯುತ್ತಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ ಮೊದಲ ಪಂದ್ಯವನ್ನಾಡಿದೆ. ಆರ್ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರೆ, ಅತ್ತ ಗುಜರಾತ್ ಜೈಂಟ್ಸ್ ಸೋಲನುಭವಿಸಿದೆ. ಹೀಗಾಗಿ ಇಂದಿನ ಮೊದಲ ಗೆಲುವಿಗಾಗಿ ಬೆತ್ ಮೂನಿ ಪಡೆ ಕಣಕ್ಕಿಳಿಯಲಿದೆ.
ಇನ್ನು ಗುಜರಾತ್ ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದು ಇದರಿಂದ ಹೊರಬರಲು ನೋಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದ ಮನೆಯಂಗಳದಲ್ಲಿ ಮತ್ತೊಂದು ಜಯ ಸಾಧಿಸಲಿದೆ ಎಂದು ಕಾದು ನೋಡಬೇಕಾಗಿದೆ. ಈ ಎರಡು ಘಟಾನುಘಳಿಗಳ ನಡುವೆ ಪದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ಸಜ್ಜಾಗಿದೆ.