ಎಷ್ಟೋ ಜನ್ಮದ ಪುಣ್ಯ ಅಭಿಮಾನಿಗಳೆಂದರೆ ಅದು ನಮ್ಮ RCB ಫ್ಯಾನ್ಸ್: ಇರ್ಫಾನ್ ಪಠಾಣ್

ಎಷ್ಟೋ ಜನ್ಮದ ಪುಣ್ಯ ಅಭಿಮಾನಿಗಳೆಂದರೆ ಅದು ನಮ್ಮ RCB ಫ್ಯಾನ್ಸ್: ಇರ್ಫಾನ್ ಪಠಾಣ್

ಬೆಂಗಳೂರು: ಇಡೀ ವಿಶ್ವದಾದ್ಯಂತ ದೊಡ್ಡ ಪ್ರೀಮಿಯರ್ ಲೀಗ್ ಎಂದರೆ ಅದು ನಮ್ಮ ಭಾರತದ ಪ್ರೀಮಿಯರ್ ಲೀಗ್ ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 16 ವರ್ಷ ಕಳೆದರೂ ಸಹ ಒಂದೇ ಒಂದು ಬಾರಿ ಸಹ ಕಪ್ಪನ್ನು ಗೆದ್ದಿಲ್ಲ ಪ್ರತೀ ಸೀಸನ್​ನಲ್ಲೂ ಲೆಕ್ಕಚಾರ, ಕೊನೆಗೆ ನೋವಿನ ವಿದಾಯ ಇದಾಗಲೂ ಅಂದಿಗೂ ಇಂದಿಗೂ ಎಂದೆಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ನಿಷ್ಠೆ ಮಾತ್ರ ಇನ್ನೂ ಸಹ ಬದಲಾಗಿಲ್ಲ.

ವರ್ಷ ವರ್ಷದಲ್ಲಿ ಸಹ ಅಭಿಮಾನಿಗಳ ಸಂಖ್ಯೆ ಏರುತ್ತದೆ ಹೊರತು ಎಂದಿಗೂ ಸಹ ಇಳಿಯುವುದಿಲ್ಲ ಪ್ರತಿ ವರ್ಷ ಐಪಿಎಲ್ ಸ್ಟಾರ್ಟ್ ಆದಾಗ ಈ ಸಲ ಕಪ್ ನಮ್ದೇ ಎನ್ನುವ ವಿಶ್ವಾಸ ಆರ್‌ಸಿಬಿ ಅಭಿಮಾನಿಗಳಲ್ಲಿ ಮೂಡಿರುತ್ತದೆ.

ಕಪ್ ಕೈತಪ್ಪಿ ಹೋದರೆ ಪರ್ವಾಗಿಲ್ಲ ಮುಂದಿನ ಸಲ ಕಪ್ ನಮ್ದೇ ಎನ್ನುವ ವಿಶ್ವಾಸದಿಂದ ಅಭಿಮಾನಿಗಳು ಆಟಗಾರರಿಗೆ  ಉರಿದುಂಬಿಸುತ್ತಾರೆ ಹಾಗೆ ಆರ್‌ಸಿಬಿ ಇಂಥ ಅಭಿಮಾನಿಗಳನ್ನು ಪಡೆಯಲು ಎಷ್ಟು ವರ್ಷದ ತಪಸ್ಸಿನ ಪುಣ್ಯ, ಹೀಗಾಗಿ ಇಡೀ ವಿಶ್ವದಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳೆಂದರೆ ಅದು ಆರ್‌ಸಿಬಿ ಫ್ಯಾನ್ಸ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗವನ್ನು ಸಂಪಾದಿಸಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಒಂದೇ ಒಂದು ಕಪ್ ಗೆಲ್ಲದಿದ್ದರೂ ಇಷ್ಟೊಂದು ಫ್ಯಾನ್ಸ್ ಬೇಸ್ ಉಳಿಸಿಕೊಳ್ಳುವುದು ಸುಲಭವಲ್ಲ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ಆರ್​ಸಿಬಿ ತಂಡಕ್ಕೆ ಇರುವಂತಹ ಅಭಿಮಾನಿಗಳ ಬಳಗವನ್ನು ಈವರೆಗೆ ನಾನೆಲ್ಲೂ ನೋಡಿಲ್ಲ. ನನ್ನ ಪ್ರಕಾರ, ಇಂತಹ ಫ್ಯಾನ್ ಬೇಸ್ ವಿಶ್ವದ ಯಾವುದೇ ತಂಡಕ್ಕಿಲ್ಲ. ಅಂತಹದೊಂದು ಅಭಿಮಾನಿಗಳ ಬಳಗವನ್ನು ಆರ್​ಸಿಬಿ ತಂಡ ಹೊಂದಿದೆ.

ಆರ್​ಸಿಬಿ ತಂಡವು ಇದುವರೆಗೆ ಕಪ್ ಗೆದ್ದಿಲ್ಲ ಎಂಬುದು ನಿಜ. ಆದರೂ ಅಭಿಮಾನಿಗಳ ಬಳಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳೆಂದರೆ ಅದು ಆರ್​ಸಿಬಿ ಫ್ಯಾನ್ಸ್​ ಮಾತ್ರ. ಒಂದು ವೇಳೆ ಆರ್​ಸಿಬಿ ಕಪ್ ಗೆದ್ದರೆ ಅದುವೇ ಐಪಿಎಲ್​ ಇತಿಹಾಸದ ಅತೀ ದೊಡ್ಡ ಮೂಮೆಂಟ್ ಆಗಿರಲಿದೆ ಎಂದು ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ.

2016 ರಲ್ಲಿ ಆರ್​ಸಿಬಿ ಕಪ್ ಗೆಲ್ಲುವ ಸನಿಹಕ್ಕೆ ಬಂದಿತ್ತು. ನಾನು ಆ ವರ್ಷ ಕಪ್ ಆರ್​ಸಿಬಿ ತಂಡದ್ದೇ ಎಂದುಕೊಂಡಿದ್ದೆ. ಆದರೆ ಅಂತಿಮ ಹಂತದಲ್ಲಿ ಎಡವಿತು. ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಆರ್​ಸಿಬಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ ಅದುವೇ ಹೊಸ ಇತಿಹಾಸವಾಗಲಿದೆ. ಅದುವೇ ಐಪಿಎಲ್​ನ ಅತೀ ದೊಡ್ಡ ಕ್ಷಣವಾಗಲಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್​ಗಾಗಿ ಆರ್​ಸಿಬಿ ತಂಡವು 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ತಂಡದಲ್ಲಿ ಹೊಸದಾಗಿ ಅಲ್ಝಾರಿ ಜೋಸೆಫ್, ಲಾಕಿ ಫರ್ಗುಸನ್, ಟಾಮ್ ಕರನ್​ನಂತಹ ಸ್ಟಾರ್ ಆಟಗಾರರ ಎಂಟ್ರಿಯಾಗಿದೆ. ಹೀಗಾಗಿ ಈ ಬಾರಿ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಅಭಿಮಾನಿಗಳು.

 

ಫ್ರೆಶ್ ನ್ಯೂಸ್

Latest Posts

Featured Videos