ರವೀನಾ ಟಂಡನ್ ಈ ಅಜ್ಜಿ !

ರವೀನಾ ಟಂಡನ್ ಈ ಅಜ್ಜಿ !

ಮುಂಬೈ, ಸೆ. 9: ಬಾಲಿವುಡ್ ನಟಿ ರವೀನಾ ಟಂಡನ್ ಅಜ್ಜಿಯಾಗುವ ಸಂಭ್ರಮದಲ್ಲಿದ್ದಾರೆ. ರವೀನಾ ತನ್ನ ದತ್ತು ಮಗಳು ಛಾಯಾ ಸೀಮಂತ ಕಾರ್ಯಕ್ರಮ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ತಾನು ಆದಷ್ಟು ಶೀಘ್ರ ಅಜ್ಜಿಯಾಗುವುದಾಗಿ ಖುಷಿ ಹಂಚಿಕೊಂಡಿದ್ದಾರೆ.
“ನಾನು ಮತ್ತು ನನ್ನ ಸಂಸಾರ! ನನ್ನ ಮಗುವಿನ ಮಗುವಿಗೆ ಕೌಂಟ್ಡೌನ್ ಪ್ರಾರಂಭವಾಗಿದೆ” ಎಂದು ರವೀನಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.ಜತೆಗೆ ಛಾಯಾ ಅವರ ಸೀಮಂತದ ಅನೇಕ ಚಿತ್ರಗಳನ್ನು ಸಹ ಹಾಕಿಕೊಂಡಿದ್ದಾರೆ.

ಛಾಯಾ ಅವರು 2016 ರಲ್ಲಿ ಗೋವಾದಲ್ಲಿ ನಡೆದ ಹಿಂದೂ-ಕ್ಯಾಥೊಲಿಕ್ ಸಮಾರಂಭವೊಂದರಲ್ಲಿ ಶಾನ್ ಮೆಂಡಿಸ್ ಅವರನ್ನು ವಿವಹವಾಗಿದ್ದರು. ಇದೀಗ ಕಳೆದ ವಾರಾಂತ್ಯದಲ್ಲಿ ರವೀನಾ ಕುಟುಂಬ ದತ್ತು ಮಗಳ ಸೀಮಂತವನ್ನು ಅದ್ದೂರಿಯಾಗಿ ನೆರವೇರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos