ಕ್ರೇಜಿಸ್ಟಾರ್ ರವಿಚಂದ್ರನ್ 2ನೇ ಪುತ್ರ ವಿಕ್ರಮ್ ಸ್ಯಾಂಡಲ್ ವುಡ್ ಗೆ

ಕ್ರೇಜಿಸ್ಟಾರ್ ರವಿಚಂದ್ರನ್ 2ನೇ ಪುತ್ರ ವಿಕ್ರಮ್ ಸ್ಯಾಂಡಲ್ ವುಡ್ ಗೆ

ಫೆ.28, ನ್ಯೂಸ್ಎಕ್ಸ್ ಪ್ರೆಸ್: ಕ್ರೇಜಿಸ್ಟಾರ್ ರವಿಚಂದ್ರನ್ 2 ನೇ ಮಗ ವಿಕ್ರಮ್ ರವಿಚಂದ್ರನ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಇನ್ನೂ ಶೀರ್ಷಿಕೆಯಿಡದ ಚಿತ್ರ ವನ್ನ ಸಹನಾ ಮೂರ್ತಿ ನಿರ್ದೇಶನ ಮಾಡಲಿದ್ದಾರೆ.

ವಿಕ್ರಮ್ ರವರ ಮೊಟ್ಟ ಮೊದಲ ಚಿತ್ರ, ಹಾಡಿನ ಚಿತ್ರೀಕರಣದ ಮೂಲಕ ಶುರುವಾಗಲಿದೆ. ಸಿನಿಮಾಗೆ ಸಂಗೀತ ಅರ್ಜುನ್ ಜನ್ಯ ಮ್ಯೂಸಿಕ್ ನೀಡಲಿದ್ದಾರೆ. ಮಾರ್ಚ್ 1 ರಿಂದ ಚಿತ್ರದ ಸಾಂಗ್ ರೆಕಾರ್ಡಿಂಗ್ ಶುರುವಾಗಲಿದೆ. ಚಿತ್ರದ ಶೂಟಿಂಗ್ ಮೆ.1ರಿಂದ ಕೇರಳದಲ್ಲಿ ಶುರುವಾಗಲಿದ್ದು ಚಿತ್ರಕ್ಕಾಗಿ ವಿಕ್ರಂ ಭರ್ಜರಿ ತಯಾರಿ ನಡೆಸಿದ್ದಾರೆ. ಸ್ಪೆಷಲ್ ಆಕ್ಟಿಂಗ್ ಟ್ರೈನಿಂಗ್ ಕ್ಲಾಸ್ಗೆ ಹೋಗುತ್ತಿದ್ದು, ಅಭಿನಯ ತರಂಗದಲ್ಲಿ ತರಗತಿಗಳನ್ನ ಅಟೆಂಡ್ ಮಾಡುತ್ತಿದ್ದಾರೆ.

ಈ ಮುಂಚೆ ವಿಕ್ರಮ್, ಅವರ ತಂದೆ ರವಿಚಂದ್ರನ್ ನಾಯಕರಾಗಿದ್ದ ಮಲಯಾಳಂ ರೀಮೇಕ್ ‘ಟ್ರಾಫಿಕ್’ ಚಿತ್ರದಲ್ಲಿ ಪಾತ್ರವೊಂದ್ರಲ್ಲಿ ನಟಿಸಿದ್ದರು. ಈಗ ಪೂರ್ಣ ಪ್ರಮಾಣದ ನಾಯಕನಾಗಿ ಚಂದನವನಕ್ಕೆ ಕಾಲಿಲಿಟ್ಟಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಕ್ಯಾಮರಾ ಕೈಚಳಕ, ಕೆ.ಎಂ ಪ್ರಕಾಶ್ ಸಂಕಲನವಿರಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್ವುಡ್ ಪ್ರವೇಶ ಮಾಡಿದ್ದಾರೆ. ಈ ಅವರ ತಮ್ಮ ವಿಕ್ರಮ್ ಕೂಡ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos