ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ

ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದಾರೆ. ಮನೋರಂಜನ್ ರವಿಚಂದ್ರನ್ ನಾಯಕನಾಗಿ ಮಿಂಚುತ್ತಿದ್ದರೇ, ವಿಕ್ರಂ ರವಿಚಂದ್ರನ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೊಬ್ಬರು ಸಹೋದರಿ ಕೂಡ ಇದ್ದಾರೆ. ಅವರ ಹೆಸರು ಗೀತಾಂಜಲಿ.
ಬೆಳೆದ ಮಕ್ಕಳು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ, ತಂದೆಯಾಗಿ ರವಿಚಂದ್ರನ್ ಅವರ ಮಕ್ಕಳ ಮದುವೆ ಮಾಡಲು ತಯಾರಿ ನಡೆಸಿದ್ದಾರೆ.
ಅಂದು ರವಿಚಂದ್ರನ್ ಮಗಳು, ಈಗ ಹೀರೋಯಿನ್!
ಹೌದು, ಕ್ರೇಜಿಸ್ಟಾರ್ ನಿವಾಸದಲ್ಲಿ ಈಗ ಮದ್ವೆ ಸಂಭ್ರಮ ಮನೆ ಮಾಡಿದೆ. ಕ್ರೇಜಿಸ್ಟಾರ್ ಪುತ್ರಿ ಗೀತಾಂಜಲಿ ವೈವಾಹಿಕ ಜೀವನಕ್ಕೆ ಅಣಿಯಾಗಿದ್ದು, ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿಯಾಗಿದೆಯಂತೆ. ಹಾಗಿದ್ರೆ, ಎಂಗೇಜ್ ಮೆಂಟ್ ಯಾವಾಗ? ಕ್ರೇಜಿಸ್ಟಾರ್ ಅಳಿಯ ಯಾರು? ಮುಂದೆ ಓದಿ…
ಫೆಬ್ರವರಿ 22 ರಂದು ನಿಶ್ಚಿತಾರ್ಥ ನಾಳೆ ಎಂಗೇಜ್ ಮೆಂಟ್ರವಿಚಂದ್ರನ್ ಮಗಳಿ ಗೀತಾಂಜಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಾಳೆ (ಫೆಬ್ರವರಿ 22) ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.
ಉದ್ಯಮಿ ಅಜಯ್ ಕ್ರೇಜಿಸ್ಟಾರ್ ಅಳಿಯ ಯಾರು?
ರವಿಚಂದ್ರನ್ ಅವರ ಪುತ್ರಿಯನ್ನ ವರಿಸಲಿರುವ ವರ ಯಾರು ಎಂಬ ಕುತೂಹಲಕ್ಕೆ ಒಂದು ಹಂತದ ಉತ್ತರ ಸಿಕ್ಕಿದೆ. ಅಂದ್ರೆ, ಅವರ ಹೆಸರು ಮಾತ್ರ ಬಹಿರಂಗವಾಗಿದ್ದು, ಫೋಟೋ ಸದ್ಯಕ್ಕೆ ಸಿಕ್ಕಿಲ್ಲ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಅಜಯ್ ಜೊತೆ ಗೀತಾಂಜಲಿ ನಿಶ್ಚಿತಾರ್ಥ ನಡೆಯಲಿದೆಯಂತೆ.

ಫ್ರೆಶ್ ನ್ಯೂಸ್

Latest Posts

Featured Videos