ರವಿಶಾಸ್ತ್ರೀ ಸಂಭಾವನೆ ಎಷ್ಟು ಗೋತ್ತಾ!

ರವಿಶಾಸ್ತ್ರೀ ಸಂಭಾವನೆ ಎಷ್ಟು ಗೋತ್ತಾ!

ಮುಂಬೈ, ಸೆ. 9: ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಪುನರ್ ಆಯ್ಕೆಯಾಗಿ ದಿನಗಳೇ ಉರುಳಿದರೂ ಚರ್ಚೆ ಮಾತ್ರ ಇನ್ನು ಅಂತ್ಯಗೊಂಡಿಲ್ಲ. ಶಾಸ್ತ್ರಿ ವಾರ್ಷಿಕ ಸರಿಸುಮಾರು 10 ಕೋಟಿ ರೂ. ಸ್ಯಾಲರಿ ಪಡೆಯಲಿದ್ದಾರೆ. ಮೊದಲ ಅವಧಿಯಲ್ಲಿ ಶಾಸ್ತ್ರಿ 8 ಕೋಟಿ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದರು. ಇದೀಗ ಸರಿಸುಮಾರು 9.5 ಕೋಟಿಯಿಂದ 10 ಕೋಟಿ ರೂ.ವೇತನ ಪಡೆಯಲಿದ್ದಾರೆ. 2ನೇ ಅವಧಿಗೆ ಭಾರತ ತಂಡದ ಮಾರ್ಗದರ್ಶನ ಜವಾಬ್ದಾರಿ ನಿರ್ವಹಿಸುತ್ತಿರುವ ಶಾಸ್ತ್ರಿಗೆ ಇದೀಗ ಮೊದಲ ಸವಾಲು ಸೌತ್ ಆಫ್ರಿಕಾ ವಿರುದ್ಧದ ಸರಣಿ. ಮೊದಲ ಅವಧಿಯ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ವಶಪಡಿಸಿ ತವರಿಗೆ ವಾಪಾಸ್ಸಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos