ಭಾವಿ ಪತಿಯ ಮುಂದೆ ಯುವತಿಯ ಸಾಮೂಹಿಕ ಅತ್ಯಾಚಾರ!

ಭಾವಿ ಪತಿಯ ಮುಂದೆ ಯುವತಿಯ ಸಾಮೂಹಿಕ ಅತ್ಯಾಚಾರ!

ರಾಜಸ್ತಾನ, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ರಾಜಸ್ತಾನದ ಅಲ್ವಾರ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ದುಷ್ಟರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅದ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಘಟನೆ ಏಪ್ರಿಲ್ 26ರಂದು ನಡೆದಿದೆ. ನಾಲ್ಕು ದಿನಗಳ ನಂತ್ರ ಪ್ರಕರಣ ದಾಖಲಾಗಿದೆ. ಆದ್ರೆ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಯುವತಿ ತನ್ನ ಭಾವಿ ಪತಿ ಜೊತೆ ಹೊರಟಿದ್ದಳು ಎನ್ನಲಾಗಿದೆ. ದಾರಿ ಮಧ್ಯೆ ಬೈಕ್ ಅಡ್ಡಗಟ್ಟಿದ ಬೈಕ್ ಸವಾರರು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಐದು ಮಂದಿ ಅತ್ಯಾಚಾರವೆಸಗಿದ್ದಾರೆಂದು ಯುವತಿ ದೂರಿದ್ದಾಳೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಇದ್ರಿಂದ ಕುಟುಂಬಸ್ಥರು ಭಯಗೊಂಡಿದ್ದರು ಎನ್ನಲಾಗಿದೆ. ಅತ್ಯಾಚಾರದ ಕೆಲ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ ಪಾಪಿಗಳು. ಘಟನೆ ನಡೆದು ಇಷ್ಟು ದಿನಗಳಾದ್ರೂ ಆರೋಪಿಗಳನ್ನು ಬಂಧಿಸದ ಪೊಲೀಸ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos