ರಕ್ಷಿತಾ ಪ್ರೇಮ್ ಸಹೋದರ ರಾಣಾ ಸ್ಯಾಂಡಲ್ವುಡ್ ಎಂಟ್ರಿ!

ರಕ್ಷಿತಾ ಪ್ರೇಮ್ ಸಹೋದರ ರಾಣಾ ಸ್ಯಾಂಡಲ್ವುಡ್ ಎಂಟ್ರಿ!

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ನಟಿ ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅವರ ಮೊದಲ ಚಿತ್ರಕ್ಕೆ ಪ್ರೇಮ್ ಆಕ್ಷನ್-ಕಟ್ ಹೇಳುತ್ತಾರೆ ಎನ್ನಲಾಗಿತ್ತಾದರೂ ಈ ಬಗ್ಗೆ ಅಧಿಕೃತ ಘೋಷಣೆ ಆಗಿರಲಿಲ್ಲ. ಆ ಎಲ್ಲ ಕುತೂಹಲಕ್ಕೆ ಭಾನುವಾರ (ಮಾ.31) ತೆರೆಬಿದ್ದಿದೆ. ವಿಶೇಷವೆಂದರೆ ಮಾ.31 ರಕ್ಷಿತಾ ಜನ್ಮದಿನ. ಈ ಸಂಭ್ರಮದ ನಡುವೆಯೇ ಸಹೋದರನ ಚೊಚ್ಚಲ ಸಿನಿಮಾ ಲಾಂಚ್ ಆಗಿದೆ. ನಿರ್ವಣದ ಹೊಣೆಯನ್ನು ಸ್ವತಃ ರಕ್ಷಿತಾ ವಹಿಸಿಕೊಂಡಿದ್ದು, ‘ರಕ್ಷಿತಾ ಫಿಲಂ ಫ್ಯಾಕ್ಟರಿ’ ಬ್ಯಾನರ್​ನಲ್ಲಿ ಈ ಚಿತ್ರ ಮೂಡಿಬರಲಿದೆ. ಅಂದಹಾಗೆ, ಈ ಸಿನಿಮಾ ಶೀರ್ಷಿಕೆ ‘ಏಕ್ ಲವ್ ಯಾ’! ಇಂಥದ್ದೊಂದು ಡಿಫರೆಂಟ್ ಹೆಸರನ್ನು ಆಯ್ಕೆ ಮಾಡಿಕೊಂಡಿರುವ ಪ್ರೇಮ್ ‘ಇದನ್ನು ಏಕಲವ್ಯ ಎಂದೂ ಕರೆಯಬಹುದು’ ಎನ್ನುತ್ತಾರೆ. ‘ಲವ್ ಈಸ್ ಆಲ್ ಯೂ ನೀಡ್’ ಎಂಬ ಟ್ಯಾಗ್​ಲೈನ್ ಕೂಡ ಗಮನ ಸೆಳೆಯುತ್ತಿದೆ. ಬ್ರೇಕಿಂಗ್ ನ್ಯೂಸ್ ಏನೆಂದರೆ ‘ಏಕ್ ಲವ್ ಯಾ’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆಯುತ್ತಿರುವ ಅಭಿಷೇಕ್ ಈಗ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಇನ್ಮುಂದೆ ಅವರು ರಾಣಾ ಎಂದು ಗುರುತಿಸಿಕೊಳ್ಳಲಿದ್ದಾರೆ. ಭಾನುವಾರ ಬಿಡುಗಡೆಯಾದ ಟೈಟಲ್ ಟೀಸರ್​ನಲ್ಲಿ ಈ ಎಲ್ಲ ಅಚ್ಚರಿಯ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ ಪ್ರೇಮ್ ರಾಣಾ ಲುಕ್ ಹೇಗಿರಲಿದೆ ಎಂಬುದಕ್ಕೂ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಪಕ್ಕಾ ಮಾಸ್ ಗೆಟಪ್​ನಲ್ಲಿ ರಾಣಾ ಪೋಸ್ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos