ರಮ್ಯಾ ಹೆಸರು ದುರ್ಬಳಕೆ ಹಿನ್ನೆಲೆ: ಖಾಸಗಿ ಚಾನೆಲ್​ಗೆ 50 ಲಕ್ಷ ರೂ. ದಂಡ

ರಮ್ಯಾ ಹೆಸರು ದುರ್ಬಳಕೆ ಹಿನ್ನೆಲೆ: ಖಾಸಗಿ ಚಾನೆಲ್​ಗೆ 50 ಲಕ್ಷ ರೂ. ದಂಡ

ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: 2013ರಲ್ಲಿ ಐಪಿಎಲ್ ಫಿಕ್ಸಿಂಗ್ ಹಗರಣದಲ್ಲಿ ನಟಿ ರಮ್ಯಾ ಭಾಗಿಯಾಗಿದ್ದಾರೆ ಎಂದು ಖಾಸಗಿ ಚಾನೆಲ್ ಸುದ್ದಿ ಪ್ರಸಾರ ಮಾಡಿತ್ತು. ಈ ಪ್ರಕರಣ ಸಂಬಂಧ ನಟಿ ರಮ್ಯಾ ಪರ ತೀರ್ಪು ಪ್ರಕಟಗೊಂಡಿದೆ. ಖಾಸಗಿ ಚಾನೆಲ್ ವಿರುದ್ಧ ರಮ್ಯಾ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ರು. ಇಂದು ನಗರದ ಸಿಟಿ ಸಿವಿಲ್ ನ್ಯಾಯಲಯದ ನಾಗಲಿಂಗನಗೌಡ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ಬಂದಿದ್ದು, ಈ ವೇಳೆ ನ್ಯಾಯಲಯ ಖಾಸಗಿ ಚಾನೆಲ್​ಗೆ 50 ಲಕ್ಷ ರೂ. ದಂಡ ವಿಧಿಸಿ ಎರಡು ತಿಂಗಳಿನಲ್ಲಿ ಪಾವತಿಸಬೇಕೆಂದು ಆದೇಶ ಹೊರಡಿಸಿದೆ. 2013ರ ಮೇ ತಿಂಗಳಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ರಾಯಭಾರಿಯಾಗಿದ್ದ ಕನ್ನಡ ನಟಿ ಹಾಗೂ ರಾಜಕಾರಣಿ ರಮ್ಯಾ, ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿ, ರಮ್ಯಾ ಅವರ ಫೋಟೊವನ್ನ ಖಾಸಗಿ ಚಾನೆಲ್​ನಲ್ಲಿ ತೋರಿಸಲಾಗಿತ್ತು. ಆದರೆ ರಮ್ಯಾ ಪರ ವಕೀಲರು, ರಮ್ಯಾ ಅವರು ಆ ಹೊತ್ತಿನಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಿನಾಕಾರಣ ರಮ್ಯಾ ಹೆಸರು ಬಳಕೆ ಮಾಡಲಾಗಿದೆ ಎಂದು ವಾದ ಮಾಡಿದರು. ಹೀಗಾಗಿ ನ್ಯಾಯಾಲಯ ಖಾಸಗಿ ಚಾನೆಲ್​ಗೆ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos