ಬಾಂಬ್‌ ಸ್ಪೋಟದ ಬಳಿಕ ಮತ್ತೆ ರಾಮೇಶ್ವರಂ ಕೆಫೆ ಪುನಾರಂಭ

ಬಾಂಬ್‌ ಸ್ಪೋಟದ ಬಳಿಕ ಮತ್ತೆ ರಾಮೇಶ್ವರಂ ಕೆಫೆ ಪುನಾರಂಭ

ಬೆಂಗಳೂರು: ಬೆಂಗಳೂರಿನಲ್ಲಿ ತನ್ನದೆ ಆದ ರುಚಿಕರ ಆಹಾರಕ್ಕೆ ಹೆಸರುವಾಸಿ ಮಾಡಿರುವ  ರಾಮೇಶ್ವರಂ ಕೆಫೆ ಮತ್ತೆ ಬಾಂಬ್‌ ಸ್ಫೋಟದ ಬಳಿಕ ಪುನಾರಂಭ ಕಂಡಿದೆ ಹೌದು, ಮಾಲಿಕರು ಹೇಳಿದಂತೆ ಮಹಾಶಿವರಾತ್ರಿಯಂದು ಕೆಫೆ  ಮತ್ತೆ ಪುನಾರಂಭಾಗುತ್ತೆ ಎಂದಿದ್ದರು.

ಇನ್ನು ಬಾಂಬ್ ಸ್ಪೋಟಕದ ನಂತರ ಇಂದು ಮಾರ್ಚ್ 9ರಂದು ದಿ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಇನ್ನು ಕೆಫೆಯ ಮುಂದೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿತ್ತು, ಕೆಫೆಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನನ್ನು ತಪಾಸಣೆ ಮಾಡಿ ಒಳಗೆ ಬಿಡುವ ಕಾರ್ಯ ನಡೆದಿದೆ.

ಹೌದು, ಮಾರ್ಚ್ 1ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಮುಚ್ಚಿದ್ದ ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಇಂದಿನಿಂದ ಪುನರಾರಂಗೊಂಡು ಗ್ರಾಹಕ ಸೇವೆ ಶುರುಮಾಡಿದೆ.

ಕೆಫೆ ಖಾಯಂ ಗ್ರಾಹಕರು ಎಂದಿನಂತೆ ಬಂದು ತಮ್ಮ ಇಷ್ಟದ ತಿಂಡಿಗಳನ್ನು ತಿನ್ನುತ್ತಿದ್ದಾರೆ ಮತ್ತು ಟೀ-ಕಾಫೀ ಸವಿಯುತ್ತಿದ್ದಾರೆ. ಆದರೆ, ಕೆಫೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರವೇಶದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲಿ ಕಾವಲು ನಿಂತಿರುವ ಭದ್ರತಾ ಸಿಬ್ಬಂದಿ ಕೆಫೆಗೆ ಆಗಮಿಸುತ್ತಿರುವ ಪ್ರತಿಯೊಬ್ಬನ ಗ್ರಾಹಕನ ಬ್ಯಾಗ್ ಗಳನ್ನು ಪರೀಕ್ಷಿಸುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos