ರಮೇಶ್ ಕುಮಾರ್ ರಾಜೀನಾಮೆ

ರಮೇಶ್ ಕುಮಾರ್ ರಾಜೀನಾಮೆ

ಬೆಂಗಳೂರು, ಜು. 29 : ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ಧನವಿನಿಯೋಗ ವಿಧೇಯಕ ಅಂಗೀಕಾರ ಹಿನ್ನಲೆ
ಸೋಮವಾರ ವಿಧಾನಸಭೆ ಕಲಾಪದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಪ್ರಸ್ತಾಪವನ್ನು ಮಂಡಿಸಿದರು. ಧ್ವನಿಮತದ ಮೂಲಕ ಬಿಎಸ್ವೈ ವಿಶ್ವಾಸ ಮತವನ್ನು ಗೆದ್ದರು.
ಆನಂತರ ಸಿಎಂ ಧನವಿನಿಯೋಗ ವಿಧೇಯಕವನ್ನು ಮಂಡಿಸಿದರು. ಹೆಚ್ಚಿನ ಚರ್ಚೆ ಇಲ್ಲದೆ ಆ ವಿಧೇಯಕವು ಅಂಗೀಕಾರಗೊಂಡಿತು. ಇದಾದ ಬಳಿಕ ವಿದಾಯ ಭಾಷಣ ಆರಂಭಿಸಿದ ರಮೇಶ್ ಕುಮಾರ ತಾವು ರಾಜೀನಾಮೆ ನೀಡುವ ತೀರ್ಮಾನವನ್ನು ಪ್ರಕಟಿಸಿದರು.
ನಂತರ ಮಾತನಾಡಿದ್ದ ಕೆ.ಆರ್.ರಮೇಶ್ಕುಮಾರ್ ಸೋಮವಾರ ನಡೆಯುವ ಕಲಾಪದಲ್ಲಿ ನಾನು ಸ್ಪೀಕರ್ ಸ್ಥಾನದಲ್ಲಿ ಕೂರುತ್ತೇನೆ. ನಾನು ಸರ್ವಾನು ಮತದಿಂದ ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇನೆ. ಹಾಗಾಗಿ ಹಣಕಾಸು ಮಸೂದೆಯನ್ನು ಅಂಗೀಕಾರ ಮಾಡುವುದು ನನ್ನ ಕರ್ತವ್ಯ. ಆನಂತರದ ಬೆಳವಣಿಗೆಗಳನ್ನು ನೀವೇ ಖುದ್ದು ನೋಡಿ ಎಂದು ಮಾರ್ವಿುಕವಾಗಿ ಹೇಳುವ ಮೂಲಕ ರಾಜೀನಾಮೆ ನೀಡುವ ಸುಳಿವು ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos