ನಮ್ಮ ಬೆಂಗಳೂರು ಪ್ರಶಸ್ತಿ ನೊಂದಾವಣಿಗೆ ರಮೇಶ್ ಅರವಿಂದ್ ಚಾಲನೆ

ನಮ್ಮ ಬೆಂಗಳೂರು ಪ್ರಶಸ್ತಿ ನೊಂದಾವಣಿಗೆ ರಮೇಶ್ ಅರವಿಂದ್ ಚಾಲನೆ

ಬೆಂಗಳೂರು: ಪ್ರತಿಷ್ಠಿತ ‘ನಮ್ಮ ಬೆಂಗಳೂರು ಪ್ರಶಸ್ತಿ’ ನೊಂದಾವಣಿಗೆ ನಟ ರಮೇಶ್ ಅರವಿಂದ್ ಅವರು ಇಂದು ಚಾಲನೆ ನೀಡಿದರು.

ನಮ್ಮ ಬೆಂಗಳೂರು ಫೌಂಡೇಶನ್‌ ಕಳೆದ 9 ವರ್ಷದಿಂದ ‘ನಮ್ಮ ಬೆಂಗಳೂರು ಅವಾರ್ಡ್‌’ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು, ಇದು 10ನೇ ಆವೃತ್ತಿ ಆಗಿದೆ. ಜನವರಿಂದಲೇ ಆಯ್ಕೆ ಆಗುವ ಅಸಾಮಾನ್ಯ ಸಾಧನೆ ಮಾಡಿದ ಸಾಮಾನ್ಯರಿಗೆ ನೀಡುವ ಗೌರವ ಇದಾಗಿದೆ.

ನಟ ರಮೇಶ್ ಅವರು ಪ್ರಶಸ್ತಿಗಾಗಿ ತಮ್ಮ ಇಚ್ಛೆಯ ಒಬ್ಬ ವ್ಯಕ್ತಿಯ ಹೆಸರನ್ನು ನಿರ್ದೇಶಿಸುವ ಮೂಲಕ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯಿಗೆ ಚಾಲನೆ ನೀಡಿದರು.

ಈ ಬಾರಿ ಆನ್‌ಲೈನ್‌ನಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ವ್ಯಕ್ತಿಗಳು ಅಥವಾ ಅರ್ಹ ವ್ಯಕ್ತಿಗಳ ಪರವಾಗಿ ಬೇರೆಯಾದರೂ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ತುಂಬಿ ನಮ್ಮ ಬೆಂಗಳೂರು ಫೌಂಡೇಶನ್ ಕಚೇರಿಗೂ ಕಳುಹಿಸ ಬಹುದಾಗಿದೆ.

ಫೆಬ್ರವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದ್ದು, ವರ್ಷದ ನಾಗರೀಕ, ವರ್ಷದ ಉದಯೋನ್ಮುಖ ತಾರೆ, ವರ್ಷದ ಪತ್ರಕರ್ತ, ವರ್ಷದ ಸಾಮಾಜಿಕ ಉದ್ಯಮಿ, ವರ್ಷದ ಸರ್ಕಾರಿ ಅಧಿಕಾರಿ, ವರ್ಷದ ನಮ್ಮ ಬೆಂಗಳೂರಿಗ ಎಂಬ ಐದು ವಿಭಾಗಗಳಲ್ಲಿ ಪ್ರಶಸ್ತಿಗೆ ಅರ್ಜಿಗಳನ್ನು ಹಾಕಬಹುದಾಗಿದೆ.

15 ಜನ ವಿಶೇಷ ತೀರ್ಪುಗಾರರು ಬಂದ ಅರ್ಜಿಗಳನ್ನು ಪರಿಶೀಲಿಸಿ ಒಂದು ತಿಂಗಳ ಅವಧಿಯ ಒಳಗೆ 80
ಜನಗಳ ಅಂತಿಮ ಪಟ್ಟಿಯನ್ನು ತಯಾರಿಸಿ ಅವರನ್ನು ಸಂದರ್ಶನ ಮಾಡಿ ಅಂತಿಮ ವಿಜೇತರನ್ನು ಆಯ್ಕೆ ಮಾಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos