ರಾಮ- ಬಾಬರಿ ಮಸೀದ್ ಜನ್ಮ ಭೂ ವಿವಾದ ಕೇಸ್

ರಾಮ- ಬಾಬರಿ ಮಸೀದ್ ಜನ್ಮ ಭೂ ವಿವಾದ ಕೇಸ್

ನವದೆಹಲಿ, ಜು . 9 : ರಾಮಜನ್ಮಭೂಮಿ – ಬಾಬರಿ ಮಸೀದಿ ಭೂ ಒಡೆತನ ವಿವಾದದ ಕೇಸಿನ ಮೂಲ ಕಕ್ಷಿದಾರರಲ್ಲಿ ಗೋಪಾಲ ಸಿಂಗ್ ವಿಶಾರದ ಅವರು ಪ್ರಕರಣದ ತುರ್ತು ವಿಚಾರಣೆ ಕೋರಿ ಇಂದು ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ರಾಮಜನ್ಮ ಭೂಮಿ ಭೂ ವಿವಾದವನ್ನು ಸೌಹಾರ್ದದಿಂದ ಬಗೆ ಹರಿಸುವ ಸಲುವಾಗಿ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಎಫ್ ಎಂ ಐ ಕಲೀಫ್ ನೇತೃತ್ವದಲ್ಲಿ ಮೂವರು ಸದಸ್ಯರ ಸಂಧಾನಕಾರರ ಸಮಿತಿಯನ್ನು ನೇಮಿಸಲಾದ ಬಳಿಕದಲ್ಲಿ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ.ತುರ್ತು ವಿಚಾರಣೆ ಸುಪ್ರೀಂ ಕೋರ್ಟ್ ಕೈಗೊಳ್ಳಬೇಕು ಎಂದು ಕಕ್ಷಿದಾರ ವಿಶಾರದ ಅವರು ತಮ್ಮ ಮೇಲ್ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಕ್ಷಿದಾರ ಗೋಪಾಲ ಸಿಂಗ್ ವಿಶಾರದ ಅವರ ಮನವಿ ಪುರಸ್ಕರಿಸಿದ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು, ಕೇಸಿನ ತುರ್ತು ವಿಚಾರಣೆಗಾಗಿ ಅದನ್ನು ಪಟ್ಟಿಗೆ ಸೇರಿಸಲು ಆದೇಶಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos