ನಟ ರಾಮ್​ ಚರಣ್​ಗೆ ಡಾಕ್ಟರೇಟ್ ಪ್ರಶಸ್ತಿ

ನಟ ರಾಮ್​ ಚರಣ್​ಗೆ ಡಾಕ್ಟರೇಟ್ ಪ್ರಶಸ್ತಿ

ಬೆಂಗಳೂರು: ಟಾಲಿವುಡ್​ ನಟ ರಾಮ್​ ಚರಣ್​ ಅವರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್​ ನೀಡಲಾಗುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಸಖತ್​ ಸಂತಸ ಆಗಿದೆ.

ರಾಮ್​ ಚರಣ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. ಅವರ ಮೊದಲ ಸಿನಿಮಾ ‘ಚಿರುತ’. ಅಂದಿನಿಂದ ಇಂದಿನ ತನಕ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ಆಂಧ್ರ ಸರ್ಕಾರದ ‘ನಂದಿ ಪ್ರಶಸ್ತಿ’, ಫಿಲ್ಮ್​ಫೇರ್​, ಸೈಮಾ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿನ ನಟನೆಗೆ ‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್​’ಗೆ ನಾಮಿನೇಟ್​ ಆಗಿದ್ದರು. ಈಗ ಅವರ ಮುಡಿಗೆ ಗೌರವ ಡಾಕ್ಟರೇಟ್​ ಮೂಲಕ ಹೊಸ ಗರಿ ಸೇರ್ಪಡೆ ಆಗುತ್ತಿದೆ.

ಏಪ್ರಿಲ್​ 13ರಂದು ಚೆನ್ನೈನ ವೇಲ್ಸ್​ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುತ್ತಿದೆ. ಸೋಶಿಯಲ್​ ಮೀಡಿಯಾ ಮೂಲಕ ರಾಮ್​ ಚರಣ್​ ಅವರಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಲು ಆರಂಭಿಸಿದ್ದಾರೆ. ಅಭಿಮಾನಿಗಳಂತೂ ಈಗಲೇ ‘ಡಾಕ್ಟರ್​ ರಾಮ್​ ಚರಣ್​’ ಎಂದು ಕರೆಯಲು ಆರಂಭಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos