ದರ್ಶನ್‌ ಸೆಲೆಬ್ರಿಟಿಗಳ ಬೃಹತ್‌ ರ‍್ಯಾಲಿ

ದರ್ಶನ್‌ ಸೆಲೆಬ್ರಿಟಿಗಳ ಬೃಹತ್‌ ರ‍್ಯಾಲಿ

ಬೆಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ನಟ ದರ್ಶನ್ ಮಧ್ಯೆ ಕಿತ್ತಾಟ ಜೋರಾಗಿದೆ. ಇಬ್ಬರ ಮಧ್ಯೆ ಮಾತಿನ ಸಮರ ಮುಂದುವರಿದಿದೆ. ಈಗ ನಟ ದರ್ಶನ್, ಉಮಾಪತಿ ವಿರುದ್ಧ ನೇರವಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದರು. ಉಮಾಪತಿ ಶ್ರೀನಿವಾಸ್ ವಿರುದ್ಧ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ಮಾಡಲು ದರ್ಶನ್​ ಫ್ಯಾನ್ಸ್ ಮುಂದಾಗಿದ್ದರು. ಇದರಲ್ಲಿ ದರ್ಶನ್ ಕೂಡ ಭಾಗಿ ಆಗಲಿದ್ದಾರೆ ಎನ್ನಲಾಗಿತ್ತು.

ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ನಡುವಿನ ವಾಕ್ಸಮರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಟಕ್ಕರ್ ನೀಡಲು ದರ್ಶನ್ ಅಭಿಮಾನಿಗಳು ಡಿ ಬಾಸ್ ಜಿಂದಾಬಾದ್ ನಡೆಸಲಿದ್ದಾರೆ.‌

ಬೊಮ್ಮನಹಳ್ಳಿಯಲ್ಲಿ ಇಂದು ದರ್ಶನ್ ಅಭಿಮಾನಿಗಳು ಬೃಹತ್ ರ‍್ಯಾಲಿ ನಡೆಸಲಿದ್ದು ಮಹಾಗಣಪತಿ ದೇವಸ್ಥಾನದಿಂದ ಎಚ್ಎಸ್ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ ವರೆಗೆ ಬೈಕ್ ನಲ್ಲಿ ರ‍್ಯಾಲಿ ನಡೆಯಲಿದೆ.

ಬೈಕ್ ರ‍್ಯಾಲಿ ವೇಳೆ ಉಮಾಪತಿ ಬೆಂಬಲಿಗರು ಹಾಗೂ ದರ್ಶನ್ ಬೆಂಬಲಿಗರ ನಡುವೆ ವಾಗ್ವಾದ ನಡೆಯುವ ಸಂಭವವಿದ್ದು ಪೊಲೀಸರು ಎಚ್ಚರ ವಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos