ಸಂಜು’ ಜತೆ ‘ಡಿಂಪಲ್ ಕ್ವೀನ್’ ಸವಾರಿ

ಸಂಜು’ ಜತೆ ‘ಡಿಂಪಲ್ ಕ್ವೀನ್’ ಸವಾರಿ

ಬೆಂಗಳೂರು, ಜೂ. 27 : ಇತ್ತೀಚೆಗಷ್ಟೇ ಉಪೇಂದ್ರ ಜತೆ ನಟಿಸಿದ ‘ಐ ಲವ್ ಯೂ’ ಚಿತ್ರ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ. ಸಿನಿಮಾಗಳಲ್ಲಿಯೇ ಮಿಂಚಿದ ‘ಡಿಂಪಲ್ ಕ್ವೀನ್’ ಈಗಲೂ  ಚಾಮ್ರ್ ಮುಂದುವರಿಸಿದ್ದಾರೆ. ಇದೇ ಶುಕ್ರವಾರ ಜೂ.28 ಬಿಡುಗಡೆ ಆಗಲಿರುವ ‘ರುಸ್ತುಂ’ ಶಿವರಾಜ್​ಕುಮಾರ್ ಜತೆ ರಚಿತಾ ನಟಿಸಿದ್ದಾರೆ.

ರಮೇಶ್ ಅರವಿಂದ್ ನಟನೆ ನಿರ್ದೇಶನದ ‘100’ ಚಿತ್ರಕ್ಕೂ ಅವರು ನಾಯಕಿ.. ‘ಮೈನಾ’ ಖ್ಯಾತಿಯ ನಿರ್ದೇಶಕ ನಾಗಶೇಖರ್ ಆಕ್ಷನ್-ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ರಚಿತಾಗೆ ಸಿಕ್ಕಿದೆ. ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಚೊಚ್ಚಲ ಸಿನಿಮಾ ‘ಅಮರ್’ಗೆ ನಿರ್ದೇಶನ ಮಾಡಿದ ಬಳಿಕ ‘ಸಂಜಯ್ ಅಲಿಯಾಸ್ ಸಂಜು’ ಚಿತ್ರವನ್ನು ನಾಗಶೇಖರ್ ಘೋಷಣೆ ಮಾಡಿದರು. ಆದರೆ ಪಾತ್ರವರ್ಗದ ಬಗ್ಗೆ ಅವರು ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.. ಅದಕ್ಕೂ ಈ ಹೊಸ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಈ ಎಲ್ಲ ಕಾರಣಗಳಿಗಾಗಿ ‘ಸಂಜಯ್ ಅಲಿಯಾಸ್ ಸಂಜು’ ಕುತೂಹಲ ಮೂಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos