ಅಣ್ಣ ತಂಗಿ ಸಂಬಂಧ ವೆಂದರೆ ಅದೊಂದು ನಿಷ್ಕಲ್ಮಶವಾದ ಪ್ರೀತಿ

ಅಣ್ಣ ತಂಗಿ ಸಂಬಂಧ ವೆಂದರೆ ಅದೊಂದು ನಿಷ್ಕಲ್ಮಶವಾದ ಪ್ರೀತಿ

ಬೆಂಗಳೂರು: ಇಂದು ದೇಶದ್ಯಾಂತ ರಕ್ಷಾ ಬಂಧನ ಹಬ್ಬದ ಸಂಭ್ರಮ. ರಕ್ಷಾಬಂಧನ ಹಿಂದೂಗಳ ಹಬ್ಬಗಳಲ್ಲಿ ಒಂದು. ಸಹೋದರ ಸಹೋದರಿಯರ ಪ್ರೀತಿ ವಾತ್ಸಲ್ಯ ಹಾಗೂ ರಕ್ಷಣೆಯ ಸಂಕೇತವಾಗಿ ದೇಶದಾದ್ಯಂತ ಈ ಹಬ್ಬವನನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷವೂ ರಕ್ಷಾಬಂಧನ ಬಂದರೆ ಸಾಕು ಮನೆ ಮನೆಯಲ್ಲಿ ಹಬ್ಬದಂತಹ ವಾತಾವರಣ ಸೃಷ್ಟಿಯಾಗಿರುತ್ತದೆ. ಅಣ್ಣ ತಂಗಿ ಸಂಬಂಧ ವೆಂದರೆ ಅದೊಂದು ನಿಷ್ಕಲ್ಮಶವಾದ ಪ್ರೀತಿ. ರಕ್ಷಾ ಬಂಧನ ಎಂದರೆ ಸಹೋದರತ್ವ ರೂಪಿಸುವ ಹಬ್ಬ. ಅಕ್ಕ ತಮ್ಮ ಹಾಗೂ ಅಣ್ಣನ ಸಂಬಂಧ ಎಂದರೆ ಅದೊಂದು ಅವಿನಾಭಾವ ಸಂಬಂಧ. ನಾವು ಎಷ್ಟೇ ಜಗಳ ಹಾಗೂ ಹೊಡೆದಾಡಿದರು ನಾವು ಒಬ್ಬರಿಗೊಬ್ಬರು ಬಿಟ್ಟಿ ಇರುವುದಿಲ್ಲ. ನಾವು ಎಷ್ಟೇ ಜಗಳವಾಡಿದರು ನಮ್ಮಲ್ಲಿ ಪ್ರೀತಿ ಹೆಚ್ಚಾಗಿ ಇರುತ್ತದೆ.

ರಕ್ಷಾ ಬಂಧನವನ್ನು ರಾಖಿ ಎಂತಲೂ ಕರೆಯುತ್ತಾರೆ. ಅಣ್ಣ ತಂಗಿ ಕೈಗೆ ರಾಖಿಯನ್ನು ಕಟ್ಟಿ ಸದಾ ನಿನ್ನ ರಕ್ಷಣೆಗೆ ನಾನಿರುವೆ ಎಂದು ಸಾರುವುದು ರಕ್ಷಾಬಂಧನ ಹಬ್ಬದ ವಿಶೇಷ, ಹಾಗೆಯೇ ತಂಗಿಯು ಅಣ್ಣನ ಕೈಗೆ ರಕ್ಷಾಬಂಧನವನ್ನು ಕಟ್ಟಿ ಅಣ್ಣನಿಂದ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಾಗೆಯೇ ಇಬ್ಬರು ಪರಸ್ಪರ ಉಡುಗೊರೆಯನ್ನು ನೀಡುತ್ತಾರೆ. ರಕ್ಷಾ ಬಂಧನ ಎಂದರೆ ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ ಸಂಬಂಧ ಎಂಬ ಅರ್ಥವನ್ನು ನೀಡುತ್ತದೆ.

ಅಣ್ಣ ತಂಗಿಯ ಸಂಬಂಧ ಉಳಿಯಲು ಗಂಟಾಗಿ ಕೈಯಲ್ಲಿ ರಾಖಿ ಕಟ್ಟುವುದು ಒಂದು ವಾಡಿಕೆ. ನಾವಿಬ್ಬರೂ ಇದೇ ತರ ಕಿತ್ತಾಡುವುದನ್ನು ಕಂಡು ಪೋಷಕರು ಗಾಬರಿಗೊಳ್ಳುತ್ತಾರೆ. ಈ ಮಕ್ಕಳು ಹೀಗೆ ಇದ್ದರೆ ಮುಂದೊಂದಿನ ಇಬ್ಬರ ಓದಿಗೆ ಬಹುದೊಡ್ಡ ಪರಿಣಾಮ ಉಂಟಾಗಬಹುದು ಎಂದುಕೊಂಡಿದ್ದರು. ಹೀಗಾಗಿ ನಾವೇ ಇವರ ಜಗಳವನ್ನು ನಿಲ್ಲಿಸಬೇಕು ಎಂದು ದಿನಕ್ಕೊಂದು ಪ್ರಯತ್ನವ ಮಾಡುತ್ತಲೇ ಇರುತ್ತಾರೆ. ಅದು ಯಾವುದು ಸಹ ಫಲಕಾರಿಯಾಗಲಿಲ್ಲ. ಹೀಗೆನೆ ಮಾಡಿದ ಉಪಾಯವೆಲ್ಲವೂ ವ್ಯರ್ಥವಾಗಿದೆ ಹಾಗಂತ ಮೌನವಾಗಿ ಕುಳಿತರೆ ಇವರಿಬ್ಬರ ಕಥೆ ಏನಾಗುತ್ತದೆಯೋ ಎಂದು ಭಯ. ಇವರಿಬ್ಬರು ಹತ್ತಿರದಲ್ಲಿದ್ದರೆ ತಾನೆ ಜಗಳ ಎಂದು ನನ್ನನ್ನು ದೂರದ ಊರಿನ ‌ಶಾಲೆಗೆ ಸೇರಿಸಿ ಸರ್ಕಾರದ ವಸತಿ ನಿಲಯದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತಾರೆ.

ದೇಶದಾದ್ಯಂತ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಅಣ್ಣ ಶುಭವಾಗಲಿ ನಿನಗೆ ನಿನ್ನ ಪ್ರೀತಿಯ ತಂಗಿಯ ಆಶೀರ್ವಾದ.

ಫ್ರೆಶ್ ನ್ಯೂಸ್

Latest Posts

Featured Videos