ಯಶ್ ಸಹೋದರಿಗೆ ರಕ್ಷಾ ಬಂಧನ ವಿಸ್

ಯಶ್ ಸಹೋದರಿಗೆ ರಕ್ಷಾ ಬಂಧನ ವಿಸ್

ಬೆಂಗಳೂರು, ಆ. 15 : ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಯಶ್ ಅವರ ಸಹೋದರಿ ನಂದನಿ ಅವರು ರಾಖಿ ಕಟ್ಟಿದ್ದಾರೆ. ಯಶ್ ತಮ್ಮ ಸಹೋದರಿ ನಂದನಿ ಜೊತೆ ಪೋಟೋ ಕ್ಲಿಕಿಸಿ ಕೊಂಡು , ನೀನು ನಿಶ್ಚಿಂತೆಯಿಂದ ಇರು, ನೀನು ಕಟ್ಟಿದ ರಾಕಿ ಇರೋವಾಗ ನನಗೆ ಚಿಂತೆ ಇಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಸಹೋದರಿ ಜೊತೆಯಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇತ್ತ ರಾಧಿಕಾ ಪಂಡಿತ್ ಅವರು ಕೂಡ ಅಮೆರಿಕಾದಲ್ಲಿ ನೆಲೆಸಿರುವ ತಮ್ಮ ಸಹೋದರನಿಗೆ ರಕ್ಷಾಬಂಧನದ ಶುಭಾಶಯ ತಿಳಿಸಿದ್ದಾರೆ. ರಾಧಿಕಾ, ತಮ್ಮ ಅಣ್ಣನೊಂದಿಗಿರುವ ಬಾಲ್ಯದ ಫೋಟೋ ಹಾಕಿ “ನನ್ನ ಪ್ರೀತಿ ಮತ್ತು ರಾಖಿಯನ್ನು ಚಿಕಾಗೋಗೆ ಕಳುಹಿಸುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಐ ಲವ್ ಯೂ, ಅಲ್ಲಿರುವ ಎಲ್ಲ ಸಹೋದರ, ಸಹೋದರಿಯರಿಗೆ ರಾಕ್ಷ ಬಂಧನದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos