ರಾಖೀ, ದವೀಂದರ್‌ ಕೌರ್‌ ಗೆ ಚಿನ್ನ

ರಾಖೀ, ದವೀಂದರ್‌ ಕೌರ್‌ ಗೆ ಚಿನ್ನ

ಅಪಿಯಾ ಸಮೋವ  ಜು. 11 : ರಾಖೀ ಹಲ್ದರ್‌ ಮತ್ತು ದವೀಂದರ್‌ ಕೌರ್‌ ಕಾಮನ್ವೆಲ್ತ್‌ ವೇಟ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಸೀನಿಯರ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಲಿಫ್ಟರ್‌ಗಳ ಶ್ರೇಷ್ಠ ನಿರ್ವಹಣೆ ಮುಂದುವರಿದಿದೆ. ಎರಡನೇ ದಿನ 5 ಚಿನ್ನ ಸೀನಿಯರ್‌ ವಿಭಾಗದಲ್ಲಿ ಎರಡು ಚಿನ್ನ ಸಹಿತ, ಜೂನಿಯರ್‌ ಮತ್ತು ಯೂತ್‌ ವಿಭಾಗದಲ್ಲಿ ಭಾರತ ಸ್ಪರ್ಧೆಯ ಎರಡನೇ ದಿನ 5 ಚಿನ್ನ ಜಯಿಸಿದೆ.

ವನಿತೆಯರ 59 ಕೆ.ಜಿ. ವಿಭಾಗದಲ್ಲಿ ಒಟ್ಟು 184 ಕೆ.ಜಿ. ಭಾರ ಎತ್ತಿದ ದವೀಂದರ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 64 ಕೆ.ಜಿ.ಯಲ್ಲಿ ರಾಖೀ 214 ಕೆ.ಜಿ. ಭಾರ ಎತ್ತಿ ಸ್ವರ್ಣ ಪಡೆದರು.

 

 

ಫ್ರೆಶ್ ನ್ಯೂಸ್

Latest Posts

Featured Videos