ರಾಜ್ಯಕ್ಕೆ ರಾಜ್ ಕುಮಾರ್ ಇದ್ದಂತೆ ದೇಶಕ್ಕೆ ಮೋದಿ ಶಕ್ತಿ: ತಾರಾ

ರಾಜ್ಯಕ್ಕೆ ರಾಜ್ ಕುಮಾರ್  ಇದ್ದಂತೆ ದೇಶಕ್ಕೆ ಮೋದಿ ಶಕ್ತಿ: ತಾರಾ

ಹಾಸನ, . 1, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ದೇಶದಲ್ಲಿ ಕಡಿಮೆಯಾಗಿದೆ ಎನ್ನುವುದು ಸುಳ್ಳು. ನಮ್ಮ ಕರ್ನಾಟಕದಲ್ಲಿ ಡಾ. ರಾಜ್ಕುಮಾರ್ ಹೆಸರು ಹೇಗೆ 1 ಶಕ್ತಿಯಾಗಿದೆಯೋ, ಹಾಗೆಯೇ ದೇಶದಲ್ಲಿ ನರೇಂದ್ರ ಮೋದಿ ಅವರು ಕೂಡ 1 ಶಕ್ತಿಯಾಗಿದ್ದಾರೆ ಎಂದು ನಟಿ, ಬಿಜೆಪಿ ನಾಯಕಿ ತಾರಾ ಹೇಳಿದರು.

ಹಾಸನದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ಎ. ಮಂಜು ಅವರ ಪರ ಪ್ರಚಾರ ನಡೆಸಲು ಬಂದಿದ್ದ ಅವರು ಮೋದಿ ಗುಣಗಾನ ಮಾಡಿದರು.

ಇದು ದೇಶಕ್ಕೆ ನಡೆಯುವ ಚುನಾವಣೆ. ಇಲ್ಲಿ ಹೆಚ್ಚಿನವರು ಮೋದಿ ಮತ್ತೆ ಗೆದ್ದುಬರಬೇಕು ಎಂದು ಬಯಸಿದ್ದಾರೆ. ಮೋದಿ ಅವರ ಅಲೆ ಕಡಿಮೆ ಆಗಿದೆ ಎನ್ನುವುದು ಸುಳ್ಳು. ವಾಸ್ತವವಾಗಿ 2014ಕ್ಕಿಂತಲೂ ಹೆಚ್ಚು ಬೆಂಬಲ ಮೋದಿ ಅವರಿಗೆ ವ್ಯಕ್ತವಾಗುತ್ತಿದೆ ಎಂದರು.

ಮೋದಿ ಅವರ ಹೆಸರಿನಲ್ಲಿಯೇ ಮೋಡಿ ಇದೆ. ಹೀಗಾಗಿ ಅವರ ಹೆಸರನ್ನು ನಾವು ಎಲ್ಲ ಕಡೆ ಬಳಸುತ್ತಿದ್ದೇವೆ. ಅವರು ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಸಾಕಷ್ಟು ಹೆಸರು ಬಂದಿದೆ, ಹೆಚ್ಚಿನ ಗೌರವ ಸಿಗುತ್ತಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಹೆಸರು ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos