ಪೌರ ಕಾರ್ಮಿಕರಿಗೆ ಪಡಿತರ ಹಂಚಿದ ರಾಜು ಅಲಬಾಳ

ಪೌರ ಕಾರ್ಮಿಕರಿಗೆ ಪಡಿತರ ಹಂಚಿದ ರಾಜು ಅಲಬಾಳ

ಅಥಣಿ: ಕೊರೋನಾ ಸಂಕಷ್ಟದ ಸಮಯದಲ್ಲಿ ಸ್ವಚ್ಚತೆ ಕಾರ್ಯದ ಜೊತೆಗೆ ಕೊರೋನಾದಿಂದ ಮೃತಪಟ್ಟವರ ಅಂತ್ಯಸAಸ್ಕಾರ ನೆರವೇರಿಸುವ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ಗುತ್ತಿಗೆದಾರ ರಾಜು ಅಲಬಾಳ ಅವರು ಪಡಿತರ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ರಾಜು ಅಲಬಾಳ ಪೌರ ಕಾರ್ಮಿಕರಲ್ಲಿ ಹಲವು ಜನರು ಕಡಿಮೆ ಸಂಬಳದಲ್ಲಿ ದುಡಿಯುವ ಹೊರಗುತ್ತಿಗೆ ಆಧಾರದಲ್ಲಿ ಬರುವ ಕಾರ್ಮಿಕರಾಗಿದ್ದಾರೆ. ಲಾಕ್‌ಡೌನ್ ನಂತಹ ಸಮಯದಲ್ಲಿ ಜನಪರ ಕೆಲಸಗಳಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಅವರ ಕಾರ್ಯ ಶ್ಲಾಘನೀಯವಾಗಿದೆ.
ಸರ್ಕಾರ ಪೌರಕಾರ್ಮಿಕರನ್ನು ಖಾಯಂಗೊಳಿಸಿದರೆ ಅವರು ಆರ್ಥಿವಾಗಿ ಸಬಲರಾಗಲು ಸಾಧ್ಯವಾಗುವುದರ ಜೊತಗೆ ಜೀವನ ಭದ್ರತೆ ದೊರೆತಂತಾಗುತ್ತದೆ. ಸದ್ಯ ಕೊರೋನಾದಿಂದ ಮೃತಪಟ್ಟ ಎಂಭತ್ತಕ್ಕೂ ಹೆಚ್ಚು ಜನರ ಸಂಸ್ಕಾರ ನಡೆಸುವ ಮೂಲಕ ಕೋವಿಡ್ ಫ್ರಂಟ್ ಲೈನ್ ವಾರಿಯರ್ ಪದಕ್ಕೆ ಅರ್ಥ ತುಂಬಿದ್ದಾರೆ. ಅಂಥವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದು 33 ಜನ ಪೌರ ಕಾರ್ಮಿಕರ ರೇಷನ್ ಕಿಟ್ ಕೊಡುವ ಮೂಲಕ ಅವರ ಉಪಕಾರವನ್ನು ಸ್ಮರಿಸುತ್ತಿದ್ದೇವೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos