ರಾಜೀವ್ ಗೌಡ ನಾಮಪತ್ರ ಸಲ್ಲಿಕೆ!

ರಾಜೀವ್ ಗೌಡ ನಾಮಪತ್ರ ಸಲ್ಲಿಕೆ!

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಗೆ ಏನು ಕೆಲವೇ ದಿನಗಳು ಬಾಕಿ ಉಳಿದಿದ್ದು ರಾಜ್ಯದಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಸಚಿವರಾದ ಕೃಷ್ಣ ಬೈರೇಗೌಡರು, ಸಚಿವರಾದ ಬೈರತಿ ಸುರೇಶ್ ಅವರು ಶಾಸಕರಾದ ಎಸಿ ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ವಾಜಿದ್ ಉಪಸ್ಥಿತರಿದ್ದರು.

ರಾಜೀವ್ ಗೌಡ ನಾಮಪತ್ರ ಸಲ್ಲಿಸಿದ ಮೇಲೆ ಆಗಮಿಸಿದ ರಾಜ್ಯ ಕಾಂಗ್ರೆಸ್ ರಣದೀಪ್ ಸುರ್ಜೆವಾಲ ರಾಜೀವ್ ಅವರ ಕೈ ಕುಲುಕಿ ಶುಭಕೋರಿದರು. ಮೂರು ಜನ ಶಾಸಕರು,ಇಬ್ಬರು ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದೆನೆ ಗ್ಯಾರಂಟಿಯಿಂದ ಕಷ್ಟದ ಸಂಧರ್ಭದಲ್ಲಿ ನೆಮ್ಮದಿ ಸಿಕ್ಕಿದೆ ಜನ ಎಲ್ಲಿ ಸಿಕ್ಕಿದ್ರೂ ನಿಮ್ಮಂತರಿಗೆ ಟಿಕೆಟ್ ಸಿಕ್ಕಿದ್ದು ಒಳ್ಳೆಯದಾಯ್ತು ಅಂತಿದ್ದಾರೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ರಾಜ್ಯದ ಪರ ಧ್ವನಿ ಎತ್ತುವವರು ಬೇಕಿದೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos