ರಾಜಸ್ಥಾನ: ‘ಮಿಗ್ 21’ ಯುದ್ಧ ವಿಮಾನ ಪತನ, ಪೈಲಟ್ ಸುರಕ್ಷಿತ

ರಾಜಸ್ಥಾನ: ‘ಮಿಗ್ 21’ ಯುದ್ಧ ವಿಮಾನ ಪತನ, ಪೈಲಟ್ ಸುರಕ್ಷಿತ

ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಭಾರತೀಯ ವಾಯುಪಡೆಯ ‘ಮಿಗ್-21’ ಯುದ್ಧ ವಿಮಾನ ರಾಜಸ್ಥಾನದ ಬಿಕಾನೇರ್‌ ಬಳಿ ಶುಕ್ರವಾರ ಪತನವಾಗಿದೆ.

ಪೈಲಟ್ ಪ್ಯಾರಾಚೂಟ್ ನೆರವಿನಿಂದ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಬಿಕಾನೇರ್ ಎಸ್‌ಪಿ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಫೆಬ್ರುವರಿ 27ರಂದು ಜಮ್ಮು ಮತ್ತು ಕಾಶ್ಮೀರದ ಬಡಗಾಂ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಮಿಗ್‌-21 ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos