ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ರಜನಿ

ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ರಜನಿ

ಚೆನ್ನೈ, 18. ಆ : ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದಾರೆ. ರಜನಿ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಹಬ್ಬದ ರೀತಿ ಆಚರಣೆ ಮಾಡುತ್ತಿದ್ದಾರೆ. ಹ್ಯಾಶ್ಟ್ಯಾಗ್ ಬಳಸಿ ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ಲಾಟ್ಫಾರ್ಮ್ಗಳಲ್ಲಿ ರಜನಿ ಅಭಿಮಾನಿಗಳು ಟ್ರೆಂಡಿಂಗ್ ಸೆಟ್ ಮಾಡಿದ್ದಾರೆ. ಹ್ಯಾಶ್ಟ್ಯಾಗ್ ಬಳಸಿ ಸೆಲೆಬ್ರಿಟಿಗಳಿಂದ ಹಿಡಿದು ರಜನಿಕಾಂತ್ ವೃತ್ತಿಜೀವನ ಹೊಸ ಸಾಧನೆಗಾಗಿ ಹಾರೈಸಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿದ 68 ವರ್ಷದ ನಟ ರಜನಿಕಾಂತ್ ಅವರು ಮೊದಲು ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಪಾಥಿನಾರು ವಯತಿನಿಲೆ ಮತ್ತು ಆಡು ಪುಲಿ ಆಟಮ್ ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರು. ಹೀರೋ ಪಾತ್ರದಲ್ಲಿ ಮೊದಲು ನಟಿಸಿದ ಚಲನಚಿತ್ರ ಭೈರವಿ 1978 ರಲ್ಲಿ ಬಿಡುಗಡೆಯಾಯಿತು.

ಫ್ರೆಶ್ ನ್ಯೂಸ್

Latest Posts

Featured Videos