ರಾಜಧಾನಿಯ ಮರಿ ಶ್ರೀನಿವಾಸ

ರಾಜಧಾನಿಯ ಮರಿ ಶ್ರೀನಿವಾಸ

ಮಹಾಲಕ್ಷ್ಮಿ ಲೇಔಟ್, ಆ. 9: ಅತ್ಯಂತ ಜನಪ್ರಿಯ ಪುರಾತನ ದೇವಸ್ಥಾನದ ಮರಿ ತಿರುಪತಿ ಶ್ರೀನಿವಾಸ ದೇವರ ದರ್ಶನಕ್ಕೆ ಬೆಂಗಳೂರು ನಗರದ ಭಕ್ತರಲ್ಲದೇ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಬರುತ್ತಾರೆ.

ಶ್ರಾವಣ ಮಾಸದ ಅಂಗವಾಗಿ ಶ್ರೀ ದೇವಾಲಯದಲ್ಲಿ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಪ್ರತಿನಿತ್ಯ ವಿಶೇಷ ಪೂಜೆ ನಡೆಯುತ್ತದೆ. ಅದರಲ್ಲೂ ಶ್ರಾವಣ ಶನಿವಾರದಂದು ಮುತ್ತಂಗಿ ಹಾಗೂ ತೋಮಾಲೆ ಅಲಂಕಾರಗಳು ವಿಶೇಷ ಶ್ರನಿವಸನಿಗೆ ಪ್ರಿಯವಾದ್ದು, ಎರಡನೆ ಶನಿವಾರ ಬೆಳ್ಳಿ ಆಭರಣಗಳ ಧಾರಣೆ ತೋಮಾಲೆ ಹೂವಿನ ಅಲಂಕೃತಗೊಳಿಸಿ ಪೂಲಂಗಿ ಹೂವಿನ ಅಲಂಕಾರ ಸೇವೆಯೊಂದಿಗೆ, ಪ್ರತಿ ಶನಿವಾರದಂದು ಭಕ್ತರಿಗೆ ಲಾಡು ಪ್ರಸಾದ ನೀಡಲಾಗುತ್ತದೆ.

ಅಂತಿಮ ಶ್ರಾವಣ ಮಾಸದ ಶನಿವಾರದಂದು ಶ್ರೀನಿವಾಸ ದೇವರಿಗೆ ಚಿನ್ನದ ಕಿರೀಟಧಾರಣೆ ತೋಮಾಲೆ ಹೂವಿನ ಅಲಂಕಾರ ಹಾಗೂ ಮೂರನೆ ವಜ್ರ ಕವಚ ಧಾರಣೆ, ತೋಮಾಲೆ ಹೂವಿನ ಅಲಂಕಾರ ನಡೆಯಲ್ಲಿದ್ದು, ನೂತನವಾಗಿ ನಿರ್ಮಿಸಿರುವ ಒಂದುವರೆ ಕೆಜಿ ತೂಕದ ಚಿನ್ನದ ಪಾದುಕೆ ಅರ್ಪಣಾ ಸೇವೆ  ನಡೆಯಲಿದೆ.

ಶ್ರೀ ನಿವಾಸ ದೇವರ ಜೊತೆಗೆ ಪದ್ಮಾವತಿ ಹಾಗೂ ಲಕ್ಷ್ಮೀ ದೇವತೆಗಳಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಅರ್ಚನೆ ಅಭಿಷೇಕ ಪೂಜಾ ಕಾರ್ಯಕ್ರಮ ನಡಯುತ್ತವೆ.

ಮರಿ ತಿಮ್ಮಪ್ಪ

ತಿರುಪತಿಯ ಮಾಧರಿಯ ಮರಿ ತಿಮ್ಮಪ್ಪ ಎಂದೇ ನಂಬಲಾಗಿದ್ದು, ಈ ದೇವಾಲಯವನ್ನು ಮರಿ ತಿರುಪತಿಯ ತಿಮ್ಮಪ್ಪನ ಅವತಾರವೆಂದು ಬಣ್ಣಿಸಲಾಗುತ್ತಿದೆ. ಎಲ್ಲಾ ಪೂಜಾ ವಿಧಾನಗಳು ತಿರುಪತಿಯಲ್ಲಿ ಆಚರಣೆ ಮಾಡುವಂತೆ ಶುಕ್ರವಾರದಂದು ಅಭಿಷೇಕ, ಭಾನುವಾರ ಕಲ್ಯಾಣೋತ್ಸವವನ್ನು ಭಕ್ತರಿಂದಲೇ ನೆರವೇರಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಭಕ್ತರ ಹರಕೆ ತೀರಿಸುವ ಪದ್ದತಿ ಅನುಸರಣೆಯಲ್ಲಿದ್ದು, ಮುಡಿ ನೀಡುವವರಿಗೆ ದೇವಾಲದಾವರಣದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಭೂ ವರಹಾ ಸ್ವಾಮಿಗೆ ಪ್ರತೇಕ ಗುಡಿ ನಿರ್ಮಿಸಲಾಗಿದೆ. ಮಂಗಳವಾರ ಹಾಗೂ ಬುಧವಾರಗಳಂದು ಭಕ್ತರು ಪೂಜೆ ಸಲ್ಲಿಸುತ್ತಾರೆ. ದೇವಳದ ಒಳಬಾಗದಲ್ಲಿರುವ ಗಣಪತಿ, ಆಂಜನೇಯ ಸ್ವಾಮಿ, ನವಗ್ರಹಗಳ ಗುಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಭಕ್ತರು ಭಕ್ತಿ ಭಾವಗಳಿಂದ ಪೂಜೆಸಲ್ಲಿಸುವ ಆಚರಣೆ ಜಾರಿಯಲ್ಲಿದೆ.

1976 ರ ಜೂನ್ ತಿಂಗಳಲ್ಲಿ ದೇವಾಲಯದಲ್ಲಿ ಪದ್ಮಾವತಿ, ಲಕ್ಷ್ಮೀ ಸಮೇತ ಶ್ರೀನಿವಾಸ ದೇವರ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗಿದೆ.

ಪ್ರತಿ ವಾರ್ಷಿಕ ಅಂಗವಾಗಿ ಏಳುದಿನಗಳ ಕಾಲ ಭ್ರಮ್ಮ ರಥೋತ್ಸವ ನಡೆಯುತ್ತದೆ. ಪುರಾಣ ಕಥೆಗಳನ್ನೇಳುವ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿರುವುದು ಭಕ್ತರು ಹಾಗೂ ನೋಡುಗರ ಆಕರ್ಷಣೆ ಆಗಿದೆ.

ವೈಕುಂಠಾಧಿಪತಿ ಎಂದೇ ಕರೆಯಲ್ಪಡುವ ಶ್ರೀನಿವಾಸ ದೇವಾಲಯದಲ್ಲಿ ಪ್ರತಿ ಶ್ರಾವಣ ಮಾಸದ ಶನಿವಾರ ವಿಶೇಷ ಪೂಜಾ ಅಲಂಕಾರ ಸೇಗಳು ನಡೆಯುತ್ತವೆ. ಸಾವಿರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅರಕೆ ಪೂಜೆ ಸಲ್ಲಿಸುತ್ತಾರೆಂದು ಶ್ರೀ ನಿವಾಸ ದೇವಾಲಯ ಸೇವಾ ಸಮಿತಿ  ಟ್ರಸ್ಟ್  ಕಾರ್ಯದರ್ಶಿ ಕೆಂಪರಾಜು ತಿಳಿಸಿದರು.

ಭಕ್ತರು ತಮ್ಮ ಕರ್ಮಗಳನ್ನು ಕಳೆದು ಕೊಳ್ಳಲು ಹರಕೆ ತೀರಿಸಲು ಶ್ರಾವಣ ಮಾಸದ ದಿನಗಳು  ವಿಶೇಷ ವಾಗಿರುವುದರಿಂದ ಬೆಂಗಳೂರ ನಗರ ಅಲ್ಲದೆ ಚಿಕ್ಕಮಗಳೂರು, ಹಾಸನ, ಮೈಸೂರು ಭಾಗಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಅರ್ಚಕರಾದ ರಾಜ ಭಟ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos