ರೈತರ ಪ್ರತಿಭಟನೆ!

ರೈತರ ಪ್ರತಿಭಟನೆ!

ನೆಲಮಂಗಲ, ಜು. 16:  ರಾಜ್ಯದಲ್ಲಿ ಬರಗಾಲ, ಮಳೆ ಇಲ್ಲ. ಇದಲ್ಲದೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಕೂಡ ಸಿಗದ ಪರಿಸ್ಥಿತಿಯಲ್ಲಿ  ರೈತರು ಕಂಗಲಾಗಿದ್ದಾರೆ. ಹೀಗಿರುವಾಗ ರೈತರು ಬೆಳೆದ ಬೆಳೆಗಳನ್ನ ಮಾರುಕಟ್ಟೆಗೆ ರವಾನಿಸುವ ವೇಳೆ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗಳಲ್ಲಿ ಸುಂಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ಲ್ಯಾಂಕೋ ಟೋಲ್ ಬಳಿ ರಸ್ತೆ ತಡೆದ ರೈತರು.

ತರಕಾರಿ ಸಾಗಾಣಿಕೆ ವಾಹನಗಳಿಗೆ ಸುಂಕ ಮುಕ್ತಕ್ಕಾಗಿ ಪ್ರತಿಭಟನೆ ನಡೆಸಿದರು. ಇನ್ನೂ ರಾಷ್ಟ್ರೀಯ ಹೆದ್ದಾರಿ 75 ರ ನೆಲಮಂಗಲ ಹಾಸನ ಲ್ಯಾಂಕೋ ಟೋಲ್ ಗೆ, ನೂರಾರು ರೈತರಿಂದ ಟೋಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೆ ಕೂಡಲೇ ರೈತರ ವಾಹನಗಳಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ತಮ್ಮ ಆಕ್ರೋಶವನ್ನ ರೈತರು ವ್ಯಕ್ತಪಡಿಸಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗುತಿದ್ದಂತೆ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿಮಾಡಿ ಪರಿಸ್ಥಿತಿಯನ್ನ ತಿಳಿಗೊಳಿಸಿ ಸಮಯವನ್ನ ನಿಗದಿಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos