ಬೆಳಗಾವಿ ಜಿಲ್ಲೆ ಬಾರದ ಮಳೆ ಬಿರುಕುಬಿಟ್ಟ ಹೊಲಗದ್ದೆಗಳು..!

ಬೆಳಗಾವಿ ಜಿಲ್ಲೆ ಬಾರದ ಮಳೆ  ಬಿರುಕುಬಿಟ್ಟ ಹೊಲಗದ್ದೆಗಳು..!

ಬೆಳಗಾವಿ: ಕುಂದನಗರಿ ಬೆಳಗಾವಿ ಜಿಲ್ಲೆಯಲ್ಲಿ ರೈತರಿಗೆ ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 8,000 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಗೀಡಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳು ಬಿರುಕು ಬಿಟ್ಟಿವೆ ಜಿಲ್ಲೆಯ 9 ತಾಲ್ಲೂಕಿನಲ್ಲೂ ಬರದ ಸಂಕಟ ಎದುರಾಗಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಎಂದು ಘೋಷಣೆ ಮಾಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 8,000 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಗೀಡಾಗಿದೆ. ಇದರಿಂದ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಭತ್ತದ ಬೆಳೆದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಈ ಸಂಬಂಧ ಬೆಳಗಾವಿ ಜಿಲ್ಲೆ ರೈತರು ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಭತ್ತ ಭಿತ್ತಿ ಕೈ ಸುಟ್ಟುಕೊಂಡಿದ್ದಾರೆ. ಯಳ್ಳೂರ, ವಡಗಾಂವ, ಶಹಾಪುರ, ಧಾಮಣೆ, ಕಡೋಲಿ ಸೇರಿ ಇನ್ನು ಹಲವು ಭಾಗಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಈ ಭಾಗದ ರೈತರು ಇಷ್ಟೆಲ್ಲ ಸಂಕಷ್ಟಕ್ಕೆ ಈಡಾಗಿದ್ದರೂ ಕೂಡ ಕೃಷಿ ಇಲಾಖೆ ಅಧಿಕಾರಿಗಲಿ ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಇನ್ನು ಈ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಇನ್ನು ಕುಂದನಗರಿ ಬೆಳಗಾವಿ ಜಿಲ್ಲೆಯಲ್ಲಿ ತರಕಾರಿ ಬೆಳೆದ ರೈತರ ಗೋಳಂತೂ ಕೇಳುವ ಹಾಗಿಲ್ಲ, ಟೊಮ್ಯಾಟೋ ಹೀರೆಕಾಯಿ ಬೆಂಡೆಕಾಯಿ ಮೆಣಸಿನಕಾಯಿ ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆ ಸಂಪೂರ್ಣವಾಗಿ ಒಣಗಿ ರೈತರು ಬೀದಿಗೆ ಬರುವ ಆತಂಕ ಸೃಷ್ಟಿಯಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬರ ಘೋಷಣೆ ಮಾಡಿ ಪ್ರತಿ ಎಕರೆಗೆ 50,000 ಪರಿಹಾರ ನೀಡುವಂತೆ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವರದಿಗಾರ
ಎ.ಚಿದಾನಂದ

ಫ್ರೆಶ್ ನ್ಯೂಸ್

Latest Posts

Featured Videos