ಇಂದು ಮಳೆ ಸಂಭವ

ಇಂದು ಮಳೆ ಸಂಭವ

ಬೆಂಗಳೂರು, ಡಿ 3: ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಉಂಟಾದ ವಾಯುಭಾರ ಕುಸಿತ ಚಂಡುಮಾರುತವಾಗಿ ಬದಲಾಗಿದ್ದು, ತಮಿಳುನಾಡಿನಲ್ಲಿ ಸುರಿಯುತ್ತಿರುವ ಮಳೆ ಬೆಂಗಳೂರಿನ ಮೇಲೆ ಪರಿಣಾಮ ಬೀರಿದೆ.

ನಗರದಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಿದ್ದು, ಚಳಿಯ ಜೊತೆಗೆ ಮೋಡ ಕವಿದ ವಾತಾವರಣವಿದೆ ಜೊತೆಗೆ ತಾಪಮಾನ 22ºC , ಗಾಳಿ 3.7 , ತೇವಾಂಶ 0.84 ದಾಖಲಾಗಿದೆ. ಮಧ್ಯಾಹ್ನ ವೇಳೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಸಂಜೆಯ ವೇಳೆಗೆ ಮಳೆ ನಿಲ್ಲಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos