ಮುಂದುವರೆದ ಮಳೆ ರಾಯ

ಮುಂದುವರೆದ ಮಳೆ ರಾಯ

ಚಿಕ್ಕೋಡಿ, ಸೆ. 7: ಭೀಕರ ಪ್ರವಾಹ ಪರಿಸ್ಥಿತಿ ಮರೇಮಾಚುವ ಮುನ್ನವೇ ಸದ್ಯ ಕ್ರಷ್ಣಾನದಿಗೆ ಭಾರಿಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ನದೀತಿರದ ಜನರಲ್ಲಿ ಭಯದ ವಾತಾವರಣವು ಸೃಷ್ಟಿಯಾಗಿದೆ.

ಚಿಕ್ಕೋಡಿ ತಾಲೂಕಿನ ನದಿತೀರದ ಕಲ್ಲೋಳ, ಯಡೂರ, ಮಾಂಜರಿ, ಇಂಗಳಿ, ಚಂದೂರ, ಭಾವನ ಸೌಂದತ್ತಿ ಸೇರಿದಂತೆ ಹಲವು ನದಿತೀರದ ಗ್ರಾಮಗಳು ಅಕ್ಷರಶಃ ಮುಳುಗಿ ಹೋಗಿದೆ ಈ ಭಾಗದ ಜನರು ಇತ್ತೀಚಿಗೆ ಮಹಾಪ್ರವಾಹದಿಂದ ಸುಧಾರಿಸಿಕೋಳ್ಳುವ ಮುನ್ನವೆ ಸದ್ಯ ಮತ್ತೆ ಕ್ರಷ್ಣಾನದಿಗೆ ಭಾರಿ ಪ್ರಮಾಣದ ಪ್ರವಾಹದ ಮುನ್ಸೂಚನೆಯನ್ನು ಕಾಣುತ್ತಿದೆ. ಒಳ್ಳೆಯ ಭೂಮಿಯು ಕ್ರಷ್ಣಾನದಿಗೆ ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದೆ.

ಸದ್ಯ ಇಂದು ಮಹಾರಾಷ್ಟ್ರದ ರಾಜೂಪೂರ ಜಲಾಶಯದಿಂದ 12,6087 ಕ್ಯೂಸೆಕ ರಷ್ಟು ನೀರನ್ನು ಹೋರಬೀಡಲಾಗುತ್ತಿದೆ. ಇದರಿಂದ ಕ್ರಷ್ಣಾನದಿಗೆ ಭಾರಿ ಪ್ರಮಾಣದ ಒಳಹರಿವಿನ ಪ್ರಮಾಣ ಹೆಚ್ಚಾಗಲಿದೆ. ಕಲ್ಲೋಳ ಯಡೂರ ಬ್ರಿಡ್ಜ್ ಬಳಿ 15,0199 ಕ್ಯೂಸೆಕನಷ್ಟು ನೀರಿನ ಹರಿವಿನ ಪ್ರಮಾಣವಿದೆ. ಇಂದು ಮತ್ತು ನಾಳೆ ಕ್ರಷ್ಣಾನದಿಗೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳು ಇದೆ ಎಂದು ಎ ಸಿ ಕರಲಿಂಗನ್ನವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos