ಹೋಳಿ ಹಬ್ಬ: ರೈನ್ ಡ್ಯಾನ್ಸ್ & ಪೂಲ್ ಡ್ಯಾನ್ಸ್ʼಗೆ ಬ್ರೇಕ್!

ಹೋಳಿ ಹಬ್ಬ: ರೈನ್ ಡ್ಯಾನ್ಸ್ & ಪೂಲ್ ಡ್ಯಾನ್ಸ್ʼಗೆ ಬ್ರೇಕ್!

ಬೆಂಗಳೂರು: ಹೋಳಿ ಸಾಂಸ್ಕೃತಿಕ ಆಚರಣೆಯ ಹಬ್ಬ. ಇದನ್ನು ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ. “ಹೋಳಿ ಹಬ್ಬ ಸಾಂಸ್ಕೃತಿಕವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ.

ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಾಗಿರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ನೀರಿನ ಅಭಾವ ಮಿತಿಮೀರುತ್ತಿರುವ ಹಿನ್ನೆಲೆ ಜಲಮಂಡಳಿ ಮತ್ತಷ್ಟು ಟಫ್ ರೂಲ್ಸ್ ತರಲು ಮುಂದಾಗಿದೆ. ನೀರನ್ನ ಪೋಲು ಮಾಡೋದನ್ನ ತಡೆದು ಅವಶ್ಯವಿರೋರಿಗೆ ಪೂರೈಸಲು ಸಜ್ಜಾಗಿದೆ.

ನೀರಿನ ಅಭಾವ ತಡೆಯಲು ಜಲಮಂಡಳಿ ಹರಸಾಹಸ ಮಾಡ್ತಿದೆ. ನೀರಿನ ಪೋಲು, ದುಂದುವೆಚ್ಚ, ತಡೆಯಲು ಪ್ಲಾನ್ ರೂಪಿಸುತ್ತಲೇ ಇದೆ. ಇದಕ್ಕಾಗಿ ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಏರಿಯೇಟರ್ ಅಳವಡಿಕೆಗೆ ಜಲ ಮಂಡಳಿ ಮಾರ್ಚ್ 31ರ ಗಡವನ್ನ ಸಹ ನೀಡಿದೆ.

ಇನ್ನು ಜಲಮಂಡಳಿ ಈಗಾಗಲೇ ಸೂಚನೆ ನೀಡಿರುವಂತೆ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ನಂತರ ವಾಣಿಜ್ಯ ಉದ್ದೇಶದ ಹೋಳಿ ಆಚರಣೆಗೆ ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ನೀರು ಬಳಸುವುದನ್ನ ನಿಷೇಧಿಸಲಾಗಿದೆ. ಈ ಬಗ್ಗೆ ತಮ್ಮ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಷನ್ ತಮ್ಮ ಸದಸ್ಯರುಗಳ ಗಮನಕ್ಕೆ ತಂದು ಅನಗತ್ಯ ದುರ್ಬಳಕೆ ಅಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos