ಕಾಫಿ ನಾಡಲ್ಲಿ ಮಳೆರಾಯನ ಆರ್ಭಟ

ಕಾಫಿ ನಾಡಲ್ಲಿ ಮಳೆರಾಯನ ಆರ್ಭಟ

ಚಿಕ್ಕಮಗಳೂರು: ರಣಭೀಕರ ಬಿಸಿಲಿನಿಂದ ಹೈರಾಣಾಗಿದ್ದ ಕರ್ನಾಟಕದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ರಾಜ್ಯದಲ್ಲಿ ಇಂದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ನಡುವೆ ಜನರಿಗೆ ಮಳೆಯ ಸಿಂಚನೆ ದೊರೆತಿದೆ. ಕಾಫಿನಾಡು ಅಂತಲೇ ಪ್ರಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆರಾಯ ತನ್ನ ಆರ್ಭಟವನ್ನು ಇಂದು ಕೂಡ ಮುಂದುವರೆಸಿದ್ದಾನೆ. ಇನ್ನು ಇಷ್ಟು ದಿನ ಬಿಸಿಲಿನ ಬೇಗೆಗ ಬೆಂದಿದ್ದ ಈ ಭಾಗದ ಜನರಿಗೆ ಸತತ ಮೂರು ದಿನಗಳಿಂದಲೂ ಮಳೆರಾಯ ತಂಪೆರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಇಂದು ಮಧ್ಯಾಹ್ನವೇ ಬಿರುಗಾಳಿಯೊಂದಿಗೆ ಮಳೆರಾಯ ತನ್ನ ಆರ್ಭಟವನ್ನು ಶುರು ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ ಭಾಗದಲ್ಲಿ ಸುಮಾರು ಕಳೆದ ಒಂದು ಗಂಟೆಯಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಒಣಗುತ್ತಿದ್ದ ಕಾಫಿ ಗಿಡಗಳಿಗೆ ಇದೀಗ ಜೀವಬಂದಾತಾಗಿದೆ. ಇದರಿಂದ ಕಾಫಿ ಬೆಳೆಗಾರರು ಹಾಗೂ ರೈತರ ಮುಖದಲ್ಲಿ ಮತ್ತಷ್ಟು ಸಂತಸ ಹೆಚ್ಚಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos