ಜಟಿ ಜಟಿ  ಮಳೆ: ಕೈ ಕೊಟ್ಟ ಟ್ರಾಫಿಕ್ ಸಿಗ್ನಲ್ ಗಳು

ಜಟಿ ಜಟಿ  ಮಳೆ: ಕೈ ಕೊಟ್ಟ ಟ್ರಾಫಿಕ್ ಸಿಗ್ನಲ್ ಗಳು

ಬೆಂಗಳೂರು, ಆ. 9: ವಿದ್ಯುತ್ ಮಿತ ಬಳಕೆಯ ಸದುದ್ದೇಶದಿಂದಾಗಿ ಅಳವಡಿಸಲಾಗಿರುವ ಸೋಲಾರ್ ಸಿಗ್ನಲ್ ಗಳು ಜಡಿ ಮಳೆ ಹಾಗೂ ಮೋಡ ಮುಸುಕಿನಿಂದಾಗಿ ಬಹುತೇಕ ಸಿಗ್ನಲ್ ಗಳು ಕೈಕೊಟ್ಟ ಕಾರಣ ಟ್ರಾಫಿಕ್ ಪೋಲೀಸರು ಹೈರಾಣಾಗಿದ್ದಾರೆ.

ಸೋಲಾರ್ ಅಳವಡಿಕೆಯ ಬಹುತೇಕ ಸಿಗ್ನಲ್ ಗಳಲ್ಲಿ ವಾಹನ ಸವಾರರು ಚಳಿಯಲ್ಲಿ ಗಂಟೆಗಟ್ಟಲೆ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಮೋಡ ಮುಸುಕಿನ ವಾತಾವರಣ ಮುಂದುವರೆದಿದ್ದು, ಬಿಸಿಲು ಬಾರದೆ ಸೋಲಾರ್ ಸಿಗ್ನಲ್ ಗಳು ಸಂಪೂರ್ಣವಾಗಿ ಕೈಕೊಟ್ಟಿವೆ.

ಹಡ್ಸನ್ ವೃತ್ತ, ಶಿವಾನಂದ ಸರ್ಕಲ್, ಆನಂದರಾವ್ ಸರ್ಕಲ್, ನವರಂಗ್, ಟೌನ್ ಹಾಲ್, ಕ್ವೀನ್ಸ್ ರಸ್ತೆ, ರೇಸ್ಕೋಸ್೯ ರೋಡ್, ಕೆ ಆರ್.ಮಾರುಕಟ್ಟೆ, ಚಾಮರಾಜ ಪೇಟೆ, ಸೇರಿದಂತೆ ಬಹುತೇಕ ಸೋಲಾರ್ ವಿದ್ಯುತ್ ಅಳವಡಿಸಲಾಗಿರುವ, ವಾಹನ ಸಂಚಾರ ದಟ್ಟಣೆ ಇರುವ ಪ್ರಮುಖ ವೃತ್ತಗಳು ಹಾಗೂ ಸಿಗ್ನಲ್ ಗಳಲ್ಲಿ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಕೆ. ಆರ್ .ಮಾರುಕಟ್ಟೆ ಸಿಗ್ನಲ್ ರಸ್ತೆಯಲ್ಲಿ ಕೊತಂಬರಿ ಹಾಗೂ ಪುದಿನ ಸೊಪ್ಪುಇಟ್ಟು ಮಾರಾಟ ಮಾಡುತ್ತಿದ್ದುದರಿಂದ ಹಲವು ಮಂದಿ ಬೈಕ್ ಸವಾರರು ಆಯಾ ತಪ್ಪಿ ಬಿದ್ದ ಘಟನೆಗಳು ನಡೆದಿವೆ.

ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆ .ಆರ್ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾದ ಕಾರಣ ಪೋಲಿಸರು, ಸಾರ್ವಜನಿಕರು ವಾಹನ ಸವಾರರು ಸಂಜೆ ಐದು ಗಂಟೆಯವರೆಗೂ ನರಕಯಾತನೆ ಅನುಭವಿದರು.

ತರಕಾರಿ ಸೊಪ್ಪು, ಹೂವು ಹಣ್ಣು ಬಾಳೆ ಕಂದುಗಳ ಭರ್ಜರಿ ಮಾರಾಟ ಇದ್ದ ಕಾರಣ ವ್ಯಾಪಾರ ಮುಗಿಸಿ ಉಳಿಕೆ ಸೊಪ್ಪುಇತ್ಯಾದಿಗಳನ್ನು ಜಡಿ ಮಳೆಯಿಂದಾಗಿ ರಸ್ತೆಗೆ ಎಸೆದು ಹೋಗಿದ್ದರು. ಸೊಪ್ಪು ರಸ್ತೆಗೆ ಅಂಟಿಕೊಂಡಿತ್ತು. ತುಂತುರು ಮಳೆಯಾದ ಕಾರಣ ದ್ವಿಚಕ್ರ ವಾಹನ ಸವಾರರು ಜೀವ ಬಿಗಿ ಹಿಡಿದು ವಾಹನ ಚಲಾಯಿಸುತ್ತಿದ್ದ ದೃಷ್ಯಗಳು ಕಂಡು ಬಂದವು.

ಪ್ರತಿ ನಿತ್ಯದಂತೆ ಸಂಚರಿಸುತ್ತಿದ್ದ, ದ್ವಿಚಕ್ರ ವಾಹನ ಸವಾರರು ಆಯಾತಪ್ಪಿ ಬಿಳುತ್ತಿದ್ದ ಕಾರಣ ಪೋಲಿಸರು ಇವರನ್ನು ಎತ್ತಿ ಕಳಿಸಿಸುವುದರ ಜೊತೆಗೆ ಟ್ರಾಫಕ್ ಸಿಗ್ನಲ್ ಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು.

ಮೇಳೆಗ ಬಂದಾಗ ಜಾರಿ ಬೀಳುತ್ತಿದ್ದ ಬೈಕ್ ಸವಾರರ ದೃಷ್ಯಗಳು ಸರ್ವೇ ಸಾಮಾನ್ಯ ಕಡು ಬರುತ್ತಿದ್ದುದು, ಕೆಲವರಿಗೆ ಮನರಂಜನೆ ಕಲ್ಪಿಸಿತ್ತು.

ವಾಹನ ಸವಾರರು ಜಾರಿ ಬೀಳುವುದನ್ನ ಕೆಲವರು ಮನರಂಜನೆ ಪಡೆಯಲು ತಮ್ಮ ಮೊಬೈಲ್ ಕ್ಯಾಮರಗಳಲ್ಲಿ ಸೆರೆ ಹಿಡಿದು ಆನಂದಿಸುತ್ತಾ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಾ ಖುಷಿಪಡುತ್ತಿದ್ದ ಸ್ವಾರಸ್ಯಕರ ಸನ್ನಿವೇಶಗಳು ಕಂಡುಬಂದವು.

ಜಾರಿ ಬೀಳುವ ಘಟನೆಗಳು ಮರುಕಳಿಸಿದ್ದರಿಂದ ಬೇಸತ್ತ ಸಂಚಾರಿ ಪೋಲಿಸ್ ಅಧಿಕಾರಿ ಗಂಗಾಧರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ದ್ವಿಚಕ್ರ ವಾಹನ ಬಿಳುತ್ತಿದ್ದ ಜಾಗದಲ್ಲಿದ್ದ, ಸೊಪ್ಪನ್ನು ಸ್ವಚ್ಚಗೊಳಿಸಿ ಮಣ್ಣು ಹಾಕಿಸಿ ಸುಗಮ ಸಂಚಾರಕ್ಕೆ  ಅನುವು ಮಾಡಿಕೊಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos