ರಾಯಚೂರಿನ ಯುವಕ ಅಮೆರಿಕಾದಲ್ಲಿ ಸಾವು

ರಾಯಚೂರಿನ ಯುವಕ ಅಮೆರಿಕಾದಲ್ಲಿ ಸಾವು

ರಾಯಚೂರು, ಸೆ. 5: ನೀರಿಗೆ ಬಿದ್ದ ತನ್ನ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಸಿಂಧನೂರು ಮೂಲದ ಯುವಕನೊಬ್ಬ ಅಮೆರಿಕಾದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ ಅಜಯ್ ಕುಮಾರ್ (24) ಸಾವನ್ನಪ್ಪಿದ್ದಾನೆ. ಅಜಯ್ ಕುಮಾರ್ ಕಳೆದ 8 ತಿಂಗಳಿನಿಂದ ಅಮೆರಿಕಾದ ಟೆಕ್ಸಾಸ್ ನಲ್ಲಿದ್ದರು. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದರು. ಸ್ನೇಹಿತರೊಂದಿಗೆ ಮಂಗಳವಾರ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos