‘ಮೋದಿಯವರಿಗೆ ಪ್ರೀತಿಯ ಅಪ್ಪುಗೆ ನೀಡ್ತೀನಿ’ : ರಾಹುಲ್

‘ಮೋದಿಯವರಿಗೆ ಪ್ರೀತಿಯ ಅಪ್ಪುಗೆ ನೀಡ್ತೀನಿ’ : ರಾಹುಲ್

ಮಧ್ಯಪ್ರದೇಶಮೇ. 15, ನ್ಯೂಸ್ ಎಕ್ಸ್ ಪ್ರೆಸ್: ‘ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಮತ್ತು ತಂದೆಯನ್ನು ಅವಮಾನಿಸುವುದಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ದ್ವೇಷ ಸಾಧಿಸುತ್ತ  ನನ್ನ ತಂದೆ, ಅಜ್ಜಿ, ಮುತ್ತಜ್ಜಿಯರನ್ನೂ ಅವಮಾನಿಸುತ್ತಿದ್ದಾರೆ. ಆದರೆ ನಾನು ಅವರಂತೆ ಮಾಡುವುದಿಲ್ಲ. ನಾನು ಸಾಯುತ್ತೇನೆ ಹೊರತು ಮೋದಿಯವರ ತಾಯಿ, ತಂದೆಯನ್ನು ಅವಮಾನಿಸುವುದಿಲ್ಲ. ಮೋದಿಯವರು ನಮ್ಮ ಕುಟುಂಬವನ್ನು ಎಷ್ಟೇ ಅವಮಾನಿಸಿದರೂ ನಾನು ತಿರುಗಿ ಅವರಿಗೆ ಪ್ರೀತಿ, ಅಪ್ಪುಗೆಯನ್ನೇ ನೀಡುತ್ತೇನೆ ಎಂದಿದ್ದಾರೆ.

ಮೋದಿ ಹಾಗೂ ಬಿಜೆಪಿ ಇತರ ಮುಖಂಡರು ನೆಹರೂ-ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ಆದರೆ, ರಾಹುಲ್ ಗಾಂಧಿ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರೀತಿಯಿಂದಲೇ ಗೆಲ್ಲುವುದಾಗಿ ಹೇಳುತ್ತಲೇ ಬಂದಿದ್ದು ಇದೀಗ ಮತ್ತೊಮ್ಮೆ ಅದನ್ನೇ ಪುನರುಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos