ಪಿಎಂಒ ಈಗ ಪಬ್ಲಿಸಿಟಿ ಮಿನಿಸ್ಟರ್ಸ್ ಆಫೀಸ್: ರಾಹುಲ್ ಗಾಂಧಿ

ಪಿಎಂಒ ಈಗ ಪಬ್ಲಿಸಿಟಿ ಮಿನಿಸ್ಟರ್ಸ್ ಆಫೀಸ್: ರಾಹುಲ್ ಗಾಂಧಿ

ಮಣಿಪುರ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಕಚೇರಿಯನ್ನು ‘ಪಬ್ಲಿಸಿಟಿ ಮಿನಿಸ್ಟರ್ಸ್ ಕಚೇರಿ’ಯನ್ನಾಗಿ ಪರಿವರ್ತಿಸಿದ್ದಾರೆ. ತನ್ನನ್ನು ಸ್ವತಃ ಪ್ರಚಾರ ಮಾಡಿಕೊಳ್ಳುವಲ್ಲಿ ಉತ್ತಮರೆನಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ರಾಜ್ಯ ಚಲನಚಿತ್ರ ಅಭಿವೃದ್ದಿ ಮಂಡಳಿಯಲ್ಲಿ ಬುಧವಾರ ಮಣಿಪುರದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಮಾತನಾಡುತ್ತಿದ್ದರು.

”ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಮೋದಿ ಎತ್ತಿದ ಕೈ. ಅವರು ಸ್ವಪ್ರಚಾರ ಮಾಡಿಕೊಳ್ಳುವಲ್ಲಿ ನಿಸ್ಸೀಮರು. ಯೋಗಗುರು ರಾಮದೇವ್ ಸ್ವಪ್ರಚಾರ ಮಾಡಿಕೊಳ್ಳುವ ವಿಚಾರದಲ್ಲಿ ಪ್ರಧಾನಿಗೆ ಪೈಪೋಟಿ ನೀಡುತ್ತಿದ್ದಾರೆ” ಎಂದರು.

ಫ್ರೆಶ್ ನ್ಯೂಸ್

Latest Posts

Featured Videos