ರಾಹುಲ್ ಮತ್ತು ಪ್ರಿಯಾಂಕಗಾಂಧಿ ಮಕ್ಕಳಿದ್ದಂತೆ’- ಶ್ರೀನಿವಾಸ್‍

ರಾಹುಲ್ ಮತ್ತು ಪ್ರಿಯಾಂಕಗಾಂಧಿ ಮಕ್ಕಳಿದ್ದಂತೆ’- ಶ್ರೀನಿವಾಸ್‍

ಚಾಮರಾಜನಗರ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಗಾಂಧಿ ಮಕ್ಕಳಿದ್ದಂತೆ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಅವರು ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೇ ಪಾಪ ನಾನು ಇದ್ದಾಗ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ ಎಂದು ಪ್ರಿಯಾಂಕಗಾಂಧಿ ಮತ್ತು ರಾಹುಲ್‍ಗಾಂಧಿಯನ್ನು ವ್ಯಂಗ್ಯವಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನದಿಂದ ಈ ಬಾರಿ ಚುನಾವಣೆಯಲ್ಲಿ 52 ಸ್ಥಾನಕ್ಕೆ ಬಂದಿದ್ದಾರೆ. ಏಕೆ ಪ್ರಿಯಾಂಕಗಾಂಧಿ ಮತ್ತು ರಾಹುಲ್‍ಗಾಂಧಿ ಬಗ್ಗೆ ಮಾತಾನಾಡುತ್ತೀರಾ? ಅವರು ಮೊದಲು ಪಕ್ಷ ಸಂಘಟನೆ ಮಾಡುವ ಕಡೆ ಗಮನಹರಿಸಲಿ ಬಿಡಿ ಎಂದು ಹೇಳಿದರು. ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತಾನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯ ಬಗ್ಗೆ ಎಷ್ಟು ಸಲ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಅವರ ಮೇಲೆ ಚುನಾವಣೆ ಮುನ್ನವೇ ಅಸಮಾಧಾನ ತೋಡಿಕೊಂಡಿದ್ದಾರೆ..

ಫ್ರೆಶ್ ನ್ಯೂಸ್

Latest Posts

Featured Videos