ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ

ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ

ಬೆಂಗಳೂರು,ನ. 23 : ಬೆಂಗಳೂರಿನಲ್ಲಿರುವ ಪ್ರಸಿದ್ದ ದೆವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿರುವ ರಾಗಿಗುಡ್ಡ ಪ್ರಸನ್ನಾಂಜನೇಯ ದೇವಾಲಯವು ಬೆಂಗಳೂರಿನ ಜಯನಗರ 9 ನೇಯ ಬ್ಲಾಕಿನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ. ದೇವಾಲಯ ಸಂಕೀರ್ಣವು ಐದು ಎಕರೆಯಷ್ಟು ವಿಸ್ತಾರವಾಗಿ ಹರಡಿದೆ.
ರಾಗಿದಿಬ್ಬದಿಂದ ಉದ್ಭವವಾದದ್ದು ಮತ್ತು ಬೆಟ್ಟದ ಮೇಲೆ ಇದ್ದಿದ್ದರಿಂದ ಇಲ್ಲಿಗೆ ರಾಗಿ ಗುಡ್ಡ ಎನ್ನಲಾಗುತ್ತದೆ. ಶನಿವಾರ ಆಂಜನೇಯನಿಗೆ ವಿಶೇಷವಾದ ದಿನ ಹಾಗಾಗಿ ರಾಗಿಗುಡ್ಡದಲ್ಲಿ ವಿಶೇಷವಾದ ಪೂಜೆ ನಡೆಯುತ್ತೆ.
ಗುಡ್ಡದ ಮೇಲೆ ನೆಲೆಸಿರುವ ಆಂಜನೇಯನ ಜೊತೆಗೆ ಇಲ್ಲಿನ ದೇವಾಲಯ ಆವರಣದಲ್ಲಿ ರಾಮ, ಲಕ್ಷಣ ಸೀತೆ, ರಾಜರಾಜೇಶ್ವರಿ, ದಕ್ಷಿಣಮೂರ್ತಿ, ಗಣೇಶ ಹಾಗೂ ನವಗ್ರಹಗಳ ಗುಡಿಗಳನ್ನೂ ಕಾಣಬಹುದು.
ರಾಗಿ ಬೆಳೆಯುತ್ತಿದ್ದ ಹೊಲವೊಂದಕ್ಕೆ ಬೈರಾಗಿಯೊಬ್ಬ ಭಿಕ್ಷೆ ಕೇಳಲು ಹೋಗಿದ್ದನಂತೆ. ಸಾಮಾನ್ಯವಾಗಿ ಕೈಹಿಡಿತವಿದ್ದ ಅತ್ತೆಯೊಬ್ಬಳು ಇಂಥ ಬೈರಾಗಿಗಳಿಗೆ ಒಂದೆರಡು ಮುಷ್ಟಿ ಮಾತ್ರರಾಗಿ ಕೊಡುತ್ತಿದ್ದಳಂತೆ. ಅತ್ತೆ ಇಲ್ಲದ ದಿನ ಬಂದ ಬೈರಾಗಿಗೆ, ಸೊಸೆ ಮೊರದ ತುಂಬ ರಾಗಿ ದಾನವಾಗಿ ನೀಡಿದ ಸಂದರ್ಭದಲ್ಲಿ ಅತ್ತೆಯ ಕಣ್ಣಿಗೆ ಬಿದ್ದು, ಅದನ್ನು ಆಕೆ ಮರು ಕಸಿದಳಂತೆ.
ಇದರಿಂದ ಕೋಪಗೊಂಡ ಸೊಸೆಯು ತಾನು ಪತಿವೃತೆಯಾಗಿದ್ದರೆ ಇಡೀ ರಾಗಿಯ ಬಣವೆ ಕಲ್ಲಾಗಲಿ ಎಂದು ಶಾಪ ನೀಡಿದಳಂತೆ. ಅದರಂತೆಯೆ ರಾಗಿಯ ಬಣ ಗುಡ್ಡವಾಯಿತಂತೆ. ಹಾಗಾಗಿ ಆ ಗುಡ್ಡ ಹಾಗೂ ಸುತ್ತಲ ಶಿಲಾ ಪ್ರದೇಶಕ್ಕೆ ರಾಗಿಗುಡ್ಡ ಎಂಬ ಹೆಸರು ಬಂತು ಎನ್ನುವ ನಂಬಿಕೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos