ರಾಘವ ಲಾರೆನ್ಸ್ ರಿಂದ 200 ಜನರಿಗೆ ವಿದ್ಯೆ, 150 ಜನರಿಗೆ ಹೃದಯ ಚಿಕಿತ್ಸೆ

ರಾಘವ ಲಾರೆನ್ಸ್ ರಿಂದ 200 ಜನರಿಗೆ ವಿದ್ಯೆ, 150 ಜನರಿಗೆ ಹೃದಯ ಚಿಕಿತ್ಸೆ

ಹೈದರಾಬಾದ್, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಬಡವರಿಗೆ, ವೃದ್ಧರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅನೇಕ ಸಿನಿಮಾ ಕಲಾವಿದರಿದ್ದಾರೆ. ಕೆಲವರು ಯಾರಿಗೂ ಹೇಳದೆ ಒಳ್ಳೆಯ ಕೆಲಸಗಳನ್ನ ಮಾಡ್ತಾರೆ. ಮತ್ತೆ ಕೆಲವರು ತಾವು ಮಾಡುವ ಕೆಲಸ ಮತ್ತಷ್ಟು ಜನರಿಗೆ ಸ್ಫೂರ್ತಿ ಆಗಬೇಕು ಎಂದು ಗೊತ್ತಾಗುವಂತೆ ಮಾಡ್ತಾರೆ. ಇಂತವರಲ್ಲಿ ನೃತ್ಯ ಸಂಯೋಜಕ, ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ರಾಘವ ಲಾರೆನ್ಸ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಲ್ತಾರೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ಅವರು ಮಾಡುತ್ತಿರುವ ಸಾಮಾಜಿಕ ಕೆಲಸಗಳು ಆಗಿವೆ. ನಟ ರಾಘವ ಲಾರೆನ್ಸ್ ಹೆಸರಿನಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಿದೆ. ಇದಕ್ಕೆ ಲಾರೆನ್ಸ್ ಅವರೇ ಸಂಸ್ಥಾಪಕರು. ಈ ಸಂಸ್ಥೆ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವು ಕೊಟ್ಟಿದ್ದಾರೆ ಮತ್ತು ಕೊಡುತ್ತಿದ್ದಾರೆ. ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯೆ ಕೊಡಿಸುವಂತಹ ಮಹಾನ್ ಕೆಲಸವನ್ನ ಈ ಟ್ರಸ್ಟ್ ಮೂಲಕ ಮಾಡ್ತಿದ್ದಾರೆ. ಹೃದಯ ಚಿಕಿತ್ಸೆ ಮಾಡಿಸುತ್ತಿದ್ದಾರೆ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಕೊಡಿಸುವುದು ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಡಜನರಿಗೆ ಹೃದಯ ಚಿಕಿತ್ಸೆ ಕೊಡಿಸುವಂತಹ ಕೆಲಸವೂ ಮಾಡಿದ್ದಾರೆ. ಸುಮಾರು 150 ಜನರಿಗೆ ಸರ್ಜರಿ ಮಾಡಿಸಿ ಜನರ ಮನಸ್ಸು ಗೆದ್ದಿದ್ದಾರೆ. ಜೊತೆಗೆ 60 ಜನರನ್ನ ದತ್ತು ಪಡೆದು ಅವರಿಗೂ ನೆರವಾಗಿದ್ದಾರೆ.

ಮೆಗಾಸ್ಟಾರ್ ಮೆಚ್ಚುಗೆ ಲಾರೆನ್ಸ್ ನೃತ್ಯ ಸಂಯೋಜಕರಾಗಿ ವೃತ್ತಿ ಆರಂಭಿಸಿದಾಗ ನಟ ಚಿರಂಜೀವಿ ಚಿತ್ರಗಳಿಗೆ ಹೆಚ್ಚು ಕೊರಿಯೋಗ್ರಫಿ ಮಾಡಿದ್ದಾರೆ. ಚಿರಂಜೀವಿ ಅಂದ್ರೆ ಲಾರೆನ್ಸ್ ಅವರಿಗೂ ಅಚ್ಚುಮೆಚ್ಚು. ಸಿನಿಮಾ ಕೆಲಸಗಳನ್ನ ಬಿಟ್ಟು ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುವ ಲಾರೆನ್ಸ್ ಬಗ್ಗೆ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕಾಂಚನಾ-3’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಚಿರು ಮಾತನಾಡಿದ್ದಾರೆ. ಲಾರೆನ್ಸ್ ಅವರ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಚಿರಂಜೀವಿ, ಲಾರೆನ್ಸ್ ಚಾರಿಟಬಲ್ ಟ್ರಸ್ಟ್ ಗೆ 10 ಲಕ್ಷ ರೂ ಹಣ ಸಹಾಯ ಮಾಡಿದ್ದಾರೆ. ರಾಜ್ಯದ ಎಲ್ಲಾ ಕಡೆಯೂ ತಮ್ಮ ಟ್ರಸ್ಟ್ ಮೂಲಕ ಜನರಿಗೆ ಸಹಾಯವಾಗಲಿ ಎಂದು ಶುಭಹಾರೈಸಿದ್ದಾರೆ ಮೆಗಾಸ್ಟಾರ್ ಚಿರು.

ಫ್ರೆಶ್ ನ್ಯೂಸ್

Latest Posts

Featured Videos