ಮೋದಿಯ ರಫೇಲ್ ಒಪ್ಪಂದ ಶೇ.9ರಷ್ಟು ಅಗ್ಗ ಎಂದ ರಕ್ಷಣಾ ಸಚಿವಾಲಯದ ವಾದ ತಿರಸ್ಕರಿಸಿದ ಸಿಎಜಿ

ಮೋದಿಯ ರಫೇಲ್ ಒಪ್ಪಂದ ಶೇ.9ರಷ್ಟು ಅಗ್ಗ ಎಂದ ರಕ್ಷಣಾ ಸಚಿವಾಲಯದ ವಾದ ತಿರಸ್ಕರಿಸಿದ ಸಿಎಜಿ

ನವದೆಹಲಿ: ರಫೇಲ್ ಒಪ್ಪಂದದ ಕುರಿತಾದ ಸಿಎಜಿ ವರದಿಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅದರ ಪ್ರಮುಖ ಅಂಶಗಳು ಇಂತಿವೆ.

ಈ ಹಿಂದಿನ ದರಕ್ಕಿಂತ ಅಂತರ-ಸರಕಾರಿ ರಫೇಲ್ ಒಪ್ಪಂದದ ದರ ಶೇ 2.86ರಷ್ಟು ಕಡಿಮೆಯಾಗಿತ್ತು.

2007ರಲ್ಲಿ ಆಫರ್ ಮಾಡಲಾದ ಬೆಲೆಗಿಂತ 2016ರಲ್ಲಿ 36 ಯುದ್ಧ ವಿಮಾನಗಳಿಗೆ ನಿಗದಿ ಪಡಿಸಲಾಗಿದ್ದ ಬೆಲೆ ಶೇ.9ರಷ್ಟು ಕಡಿಮೆ ಎಂಬ ರಕ್ಷಣಾ ಸಚಿವಾಲಯದ ವಾದವನ್ನು ಸಿಎಜಿ ತಿರಸ್ಕರಿಸಿದೆ.

ಕಾನೂನು ಸಚಿವಾಲಯದ ಸಲಹೆಯಂತೆ ರಕ್ಷಣಾ ಸಚಿವಾಲಯ ಫ್ರೆಂಚ್ ಸರಕಾರದಿಂದ ಸವರೀನ್ ಗ್ಯಾರಂಟಿ ಕೇಳಿದ್ದರೂ ಅಲ್ಲಿನ ಸರಕಾರ ಕೇವಲ ಲೆಟರ್ ಆಫ್ ಕಂಫರ್ಟ್ ನೀಡಿತ್ತು.

ಸುರಕ್ಷತೆಯ ದೃಷ್ಟಿಯಿಂದ ಎಸ್ಕ್ರೋ ಖಾತೆ ತೆರೆಯುವ ಸಲಹೆಯನ್ನು ರಕ್ಷಣಾ ಸಚಿವಾಲಯ ನೀಡಿದ್ದರೂ ಫ್ರಾನ್ಸ್ ಸರಕಾರ ಅದನ್ನು ತಿರಸ್ಕರಿಸಿತ್ತು.

2007ರ ಆಫರ್ ನಂತೆ 18 ವಿಮಾನಗಳನ್ನು ಒಪ್ಪಂದ ಸಹಿ ಹಾಕಿದ 50ನೇ ತಿಂಗಳಲ್ಲಿ ಹಸ್ತಾಂತರಿಸಬೇಕಿತ್ತು. ಉಳಿದ 18 ವಿಮಾನಗಳನ್ನು ಎಚ್‍ಎಎಲ್ ಒಪ್ಪಂದ ಸಹಿ ಹಾಕಿದ 49ರಿಂದ 72 ತಿಂಗಳೊಳಗೆ ಹಸ್ತಾಂತರಿಸಬೇಕಿತ್ತು. ಆದರೆ 2016ರ ಒಪ್ಪಂದದಂತೆ ಮೊದಲ 18 ವಿಮಾನಗಳನ್ನು 36ರಿಂದ 53 ತಿಂಗಳುಗಳೊಗಾಗಿ ಹಸ್ತಾಂತರಿಸಬೇಕಿದ್ದರೆ ನಂತರದ 18 ವಿಮಾನಗಳನ್ನು 67 ತಿಂಗಳುಗಳೊಳಗೆ ಹಸ್ತಾಂತರಿಸಬೇಕಿತ್ತು.

2007ರ ಆಫರ್‍ನಲ್ಲಿ ಡಸ್ಸಾಲ್ಟ್ ಏವ್ಯೇಶನ್ ನಿರ್ವಹಣಾ ಮತ್ತು ಫೈನಾನ್ಶಿಯಲ್ ಗ್ಯಾರಂಟಿ ಒದಗಿಸಿತ್ತಲ್ಲದೆ ಒಪ್ಪಂದದ ಒಟ್ಟು ಮೌಲ್ಯದ ಶೇ 25ರಷ್ಟು ಇದಾಗಿತ್ತು. ಆದರೆ 2016ರ ಒಪ್ಪಂದದಲ್ಲಿ ಇಂತಹ ಯಾವುದೇ ಗ್ಯಾರಂಟಿ ಇರಲಿಲ್ಲ.

ಭಾರತೀಯ ವಾಯು ಪಡೆ ಏರ್ ಸ್ಟಾಫ್ ಕ್ವಾಲಿಟೇಟಿವ್ ಅಗತ್ಯತೆಗಳನ್ನು ಸರಿಯಾಗಿ ವಿವರಿಸಿರಲಿಲ್ಲ. ಅಷ್ಟೇ ಅಲ್ಲದೆ ಅದರಲ್ಲಿ ಆಗಾಗ ಬದಲಾವಣೆಗಳನ್ನು ತರಲಾಗಿದ್ದರಿಂದ ದರ ನಿಗದಿ ಪಡಿಸುವಲ್ಲಿ ಸಮಸ್ಯೆಗಳು ಸೃಷ್ಟಿಯಾಗಿತ್ತು. ಇದು ವಿಮಾನ ಪಡೆಯುವಲ್ಲಿ ವಿಳಂಬಕ್ಕೆ ಇನ್ನೊಂದು ಕಾರಣವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos