ರಫೇಲ್ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ, ತೋರಿಸಲು ಸಾಧ್ಯವಿಲ್ಲ; ಸುಪ್ರೀಂಗೆ ಕೇಂದ್ರದ ಹೇಳಿಕೆ

ರಫೇಲ್ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ, ತೋರಿಸಲು ಸಾಧ್ಯವಿಲ್ಲ; ಸುಪ್ರೀಂಗೆ ಕೇಂದ್ರದ ಹೇಳಿಕೆ

ನವದೆಹಲಿ, ಮಾ.6, ನ್ಯೂಸ್ ಎಕ್ಸ್ ಪ್ರೆಸ್:  ರಫೇಲ್​ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​​ ವಿಚಾರಣೆ ನಡೆಸಿತು.

ರಫೇಲ್​ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ. ಅದನ್ನು ತೋರಿಸಲು ಸಾಧ್ಯವಿಲ್ಲ ಎಂದು  ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.

ಫ್ರಾನ್ಸ್​ನೊಂದಿಗಿನ 36 ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಪ್ರಶಾಂತ್​ ಭೂಷಣ್​, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್​ ಶೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.

ಈ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಪ್ರಶಾಂತ್​ ಭೂಷಣ್ ಸೇರಿ ಅನೇಕರು ತೀರ್ಪಿನ ಮರು ವಿಚಾರಣೆಗೆ ಕೋರಿದ್ದರು. ಅಷ್ಟೇ ಅಲ್ಲ ಮುಕ್ತ ನ್ಯಾಯಾಲಯ ವಿಚಾರಣೆ ನಡೆಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಫೆ.26ರಂದು ಈ ವಿಚಾರಣೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಮಾ.6ಕ್ಕೆ ನ್ಯಾಯಾಲಯ ಮುಂದೂಡಿತ್ತು. ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

“ಇಂಗ್ಲಿಷ್​ ದಿನ ಪತ್ರಿಕೆ ಹಿಂದು, ರಫೆಲ್​ ಕಡತಗಳನ್ನು ಕಳ್ಳತನ ಮಾಡಿದೆ. ಹಾಗಾಗಿ ಅವುಗಳನ್ನು ಕೋರ್ಟ್​​ನ ಮುಂದಿಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಲು ಸಿದ್ಧತೆ ನಡೆಸಿದೆ” ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​​ ಮುಂದೆ ಹೇಳಿಕೊಂಡಿತು. “ದಾಖಲೆಗಳು ಕಳುವಾದ ನಂತರ ಯಾವ ಕ್ರಮ ಕೈಗೊಂಡಿದ್ದೀರಿ,” ಎಂದು ಸುಪ್ರೀಂ ಕೇಂದ್ರಕ್ಕೆ ಪ್ರಶ್ನಿಸಿದೆ.

36 ರಫೇಲ್​ ಯುದ್ಧವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರಿಯಾದ ಕ್ರಮ ಅನುಸರಿಸಿದೆ. ಎಲ್ಲ ರಕ್ಷಣಾ ಒಪ್ಪಂದಗಳನ್ನು ವಿಮರ್ಶೆ ಮಾಡುತ್ತಾ ಕೂರಲು ಸಾಧ್ಯವಿಲ್ಲ. ರಫೇಲ್​ ಒಪ್ಪಂದದಲ್ಲಿ ಯಾವುದೇ ಸಂದೇಹ ಬೇಡ. ಜತೆಗೆ ವಿಮಾನ ಖರೀದಿಯ ಮೊತ್ತ ತಿಳಿಯುವುದೂ ಬೇಡ. ಈ ಒಪ್ಪಂದದಿಂದ ವಾಣಿಜ್ಯವಾಗಿ ಲಾಭವಿದೆ ಎನ್ನುವ ವಿಚಾರದಲ್ಲಿ ಹುರುಳಿಲ್ಲ. ಈ ಒಪ್ಪಂದದಲ್ಲಿ ನಾವು ಮಧ್ಯ ಪ್ರವೇಶಿಸುವ ಮಾತೇ ಇಲ್ಲ,” ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್ ​ ತೀರ್ಪು ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos