ರಫೇಲ್ ಹಗರಣದ ಪುಸ್ತಕ ಮುಟ್ಟುಗೋಲು ನಂತರ ವಾಪಸ್!

ರಫೇಲ್ ಹಗರಣದ ಪುಸ್ತಕ ಮುಟ್ಟುಗೋಲು ನಂತರ ವಾಪಸ್!

ಚೆನ್ನೈ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳನ್ನೊಳಗೊಂಡ “ರಫೇಲ್: ದಿ ಸ್ಕ್ಯಾಮ ದಟ್ ಶೂಕ್ ದಿ ನೇಶನ್ (“Rafale: The Scam That Shook the Nation”) ಪುಸ್ತಕವನ್ನು ಮುಟ್ಟುಗೋಲು ಹಾಕಿ, ನಂತರ ವಾಪಸ್ ನೀಡಿದ ನಾಟಕೀಯ ಘಟನೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದೆ. ಎಂಜಿನಿಯರ್ ಆಗಿರುವ ಎಸ್ ವಿಜಯನ್ ಎಂಬುವವರು ಈ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಬೇಕಿತ್ತು. ಆದರೆ ಅದಕ್ಕೂ ಮುನ್ನ ಚುನಾವಣಾ ಆಯೋಗದಿಂದ ಬಂದಿದೆ ಎನ್ನಲಾದ ಪತ್ರವನ್ನಿಟ್ಟುಕೊಂಡು ಅಧಿಕಾರಿಯೊಬ್ಬರು ಬಂದು ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅವರು ನೀಡಿದ ಪತ್ರದಲ್ಲಿ ಯಾವುದೇ ಸರ್ಕಾರಿ ಸೀಲ್ ಆಗಲೀ, ಚುನಾವಣಾ ಆಯೋಗದ ಲೆಟರ್ ಹೆಡ್ ಆಗಲಿ ಇರಲಿಲ್ಲ. ಖಾಲಿ ಬಿಳಿ ಹಾಳೆ ಮೇಲೆ ಬರೆಯಲಾಗಿತ್ತು. ವಿದ್ಯಾರ್ಥಿನಿ ಎದುರೂ ರಫೇಲ್ ಬಗ್ಗೆಯೇ ಸಮಾ ಭಾಷಣ ಮಾಡಿದ ರಾಹುಲ್ ಸುಮಾರು 150 ಕ್ಕೂ ಹೆಚ್ಚು ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪುಸ್ತಕ ಬಿಡುಗಡೆ ಮಾಡಲಿದ್ದ ದಿ ಹಿಂದು ಪತ್ರಿಕೆಯ ಪತ್ರಕರ್ತ ಎನ್ ರಾಮ್ ಅವರು ಈ ಘಟನೆಯನ್ನು ಖಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಜೀವಚರಿತ್ರೆಯ ಚಲನಚಿತ್ರ ಬಿಡುಗಡೆಗೆ ತಡೆ ನೀಡುವುದಿಲ್ಲ ಎಂದ ಮೇಲೆ ಈ ಪುಸ್ತಕ ಬಿಡುಗಡೆಗೆ ಮಾತ್ರ ನೀತಿ ಸಂಹಿತೆ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಈ ಘಟನೆಯ ನಂತರ ಎಚ್ಚೆತ್ತುಕೊಂಡ ಚುನಾವಣಾ ಆಯೋಗ, ನಾವು ಪುಸ್ಕವನ್ನು ವಶಕ್ಕೆ ಪಡೆಯುವಂತೆ ಯಾರಿಗೂ ಹೇಳಿಲ್ಲ. ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದೇವೆ ಎಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos