ರಾಧಿಕಾ ಪಂಡಿತ್ ಅವರ ಲಿಟ್ಲ್ ಪ್ರಿನ್ಸೆಸ್ ಹೇಗಿದ್ದಾರೆ ನೋಡಿ!

ರಾಧಿಕಾ ಪಂಡಿತ್ ಅವರ ಲಿಟ್ಲ್ ಪ್ರಿನ್ಸೆಸ್ ಹೇಗಿದ್ದಾರೆ ನೋಡಿ!

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹಲವಾರು ನಟ ನಟಿ ಸಿನಿಮಾ ಮಾಡಿ ಫೇಮಸ್ ಆಗಿದ್ದಾರೆ ಹಾಗೆ ಅವರನ್ನಾ ತೆರೆ ಮೇಲೆ ನೊಡಿ ಹೀಗೆ ಅವರು ನಿಜ ಜೀವನದಲ್ಲಿ ಇರಬೇಕೆಂದು ಅಂದು ಕೊಂಡಿದ್ದಾರೆ ಅದೇ ಅಂದು ಕೊಂಡಂತಹ ಜೋಡಿಯಾದ ರಾಧಿಕಾ ಪಂಡಿತ್ ಹಾಗೂ ಯಶ್ ರವರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಕ್ಯುಟೆಸ್ ಜೋಡಿ.
ರಾಧಿಕಾ ಪಂಡಿತ್ ಹಾಗೂ ಯಶ್ ಅವರು 2016ರಲ್ಲಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ಹಲವು ಕಡೆ ತೆರಳುತ್ತಾ ಇರುತ್ತಾರೆ. ಮಕ್ಕಳನ್ನೂ ಅವರು ಕರೆದುಕೊಂಡು ಹೋಗುತ್ತಾರೆ. ಈಗ ರಾಧಿಕಾ ಅವರು ಹಂಚಿಕೊಂಡಿರುವ ಹೊಸ ಫೋಟೋ ಗಮನ ಸೆಳೆದಿದೆ.
ಆಯ್ರಾ ಅವರು ಸ್ನಾನದ ಬಳಿಕ ಹಾಕುವ ಡ್ರೆಸ್ ಹಾಕಿದ್ದಾರೆ. ಅವಳಿಗೆ ರಾಧಿಕಾ ಶೂ ಹಾಕುತ್ತಿದ್ದಾರೆ. ‘ನಮ್ಮ ಲಿಟ್ಲ್ ಪ್ರಿನ್ಸಸ್’ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ಅನೇಕರಿಗೆ ಈ ಫೋಟೋ ನೋಡಿ ‘ಕೆಜಿಎಫ್’ ಸಿನಿಮಾ ನೆನಪಾಗಿದೆ. ಯಶ್ ಹೋಟೆಲ್ಗೆ ಬರುತ್ತಾರೆ. ಅಲ್ಲಿಗೆ ನಾಯಕಿಯ ಆಗಮನ ಆಗುತ್ತದೆ. ಆಗ ಅವರು ಯಶ್ ಇದೇ ರೀತಿಯ ಬಟ್ಟೆ ಧರಿಸಿದ್ದರು. ಆ ದೃಶ್ಯವನ್ನು ಅನೇಕರು ನೆನಪಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ನಟನೆಗೆ ಮರಳಬೇಕು ಎಂಬುದು ಅನೇಕರ ಆಸೆ. ಆದರೆ, ಅದು ಸದ್ಯಕ್ಕೆ ಈಡೇರುವ ಸೂಚನೆ ಸಿಕ್ಕಿಲ್ಲ. ಇನ್ನು, ಯಶ್ ‘ಕೆಜಿಎಫ್ 2’ ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಅವರು ಹೊಸ ಚಿತ್ರ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಬಾಲಿವುಡ್ನಿಂದಲೂ ಯಶ್ಗೆ ಆಫರ್ಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos