ರಾಧಾಷ್ಟಮಿ ಉತ್ಸವ

ರಾಧಾಷ್ಟಮಿ ಉತ್ಸವ

ಬೆಂಗಳೂರು, ಸೆ. 6: ಭಾದ್ರಪದ ಮಾಸ ಶುಕ್ಲ ಪಕ್ಷದ ಅಷ್ಟಮಿಯಂದು ರಾಧಾಷ್ಟಮಿ ಆಚರಣೆಗೆ ಪ್ರಸಿದ್ಧವಾಗಿದೆ. ಶ್ರೀ ಕೃಷ್ಣ ಭಕ್ತರಿಗೆ ಇದು ಒಂದು ಪ್ರಮುಖವಾದ ಉತ್ಸವ.

ಈ ಶುಭ ಸಂದರ್ಭದಲ್ಲಿ ಶ್ರೀ ರಾಧಾ ಕ್ರಷ್ಣಚಂದ್ರ ದೇವರಿಗೆ ಹೊಸ ವಸ್ತ್ರ ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಇಡೀ ಮಂದಿರವನ್ನು ವಿಧವಿಧ ಸುಗಂಧಭರಿತವಾದ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.

ಮುಖ್ಯ ಮಂದಿರದಲ್ಲಿ ಶ್ರೀ ರಾಧಾ ಸಹಸ್ರನಾಮ ಹೋಮ ಮಾಡಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಪುನೀತರಾದರು. ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಸಂಜೆ 6 ಗಂಟೆಯಿಂದ ವೈಭವದ ಅಭಿಷೇಕವನ್ನು ನೆರವೇರಿಸಲಾಯಿತು. ಅಭಿಷೇಕದಲ್ಲಿ ರಾಧಾಕೃಷ್ಣರಿಗೆ ಪಂಚಾಮೃತ, ಪಂಚಗವ್ಯ, ಪುಷ್ಪೋಧಕ, ಫಲೋಧಕ, ಔಷಧಿ ಮತ್ತು 108 ಕಳಸಗಳ ಅಭಿಷೇಕ ಮಾಡಲಾಯಿತು.

ಅಭಿಷೇಕದ ಅನಂತರ ಶ್ರೀ ರಾಧಾ ಕ್ರಷ್ಣಚಂದ್ರರಿಗೆ ಛಪ್ಪನ್ ಭೋಗ್ (56 ಭಕ್ಷಗಳು) ಅನ್ನು ಅರ್ಪಿಸಲಾಯಿತು ಮತ್ತು 108 ಸಸ್ಯಹಾರಿ ಕೇಕ್‌ ಗಳನ್ನು ಭಕ್ತಾದಿಗಳಿಂದ ನೈವೇದ್ಯ ಮಾಡಲಾಯಿತು.

ಭಕ್ತರು ಶ್ರೀಮತಿ ರಾಧಾ ರಾಣಿಯ ವಿಶೇಷ ಕೀರ್ತನೆಗಳನ್ನು ಮತ್ತು ಅಷ್ಟಕವನ್ನು ಹಾಡುತ್ತಿದ್ದಂತಯೇ ಸುದಿರ್ಘವಾದ ಆರತಿಯನ್ನು ಮಾಡಲಾಯಿತು. ತದನಂತರ ಪ್ರಸಾದವನ್ನು ವಿತರಿಸಲಾಯಿತು. ಭವ್ಯವಾದ ಶಯನ ಆರತಿಯೊಂದಿಗೆ ಕಾರ್ಯಕ್ರಮವು ಸಮಾಪ್ತಗೊಂಡಿತು.

ಫ್ರೆಶ್ ನ್ಯೂಸ್

Latest Posts

Featured Videos