ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ

ಕೆ.ಆರ್.ಪುರಂ, ಆ. 15: ಬೆಂಗಳೂರು ಪೂರ್ವ ತಾಲ್ಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸರಳವಾಗಿ ಆಚರಣೆ ಮಾಡಿದರು.

ಕೆ.ಆರ್.ಪುರದಲ್ಲಿ ಮಾಜಿ ಸಚಿವ, ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರ
ಅಧ್ಯಕ್ಷತೆಯಲ್ಲಿ, ರಾಷ್ತ್ರೀಯ ಹಬ್ಬಗಳ ಆಚಾರಣಾ ಸಮಿತಿ ಅಧ್ಯಕ್ಷ ತೇಜಸ್ ಕುಮಾರ್ ಅವರು ಧ್ವಜ ರೋಹಣ ನೆರವೇರಿಸಿದರು.
ಧ್ವಜರೋಹಣ ವೇಳೆ ವಿಧಾನ ಪರಿಷತ್ ಸದಸ್ಹಮ್ಮಿಕೊಳ್ಳಲಾಗಿತ್ತು. ಆಯುಕ್ತ ಜಗದೀಶ್, ಪೂರ್ವ ತಾಲ್ಲೂಕು ಶಿಕ್ಷಣಾದಿಕಾರಿ ಸಲೀಂ ಪಾಷ, ಆರೋಗ್ಯ ವೈದ್ಯಾಧಿಕಾರಿ, ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಡಾ.ಚಂದ್ರಶೇಖರ್ ಭಾಗಿಯಾಗಿದ್ದರು.

‌ನಂತರ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದು, ಕೇಂದ್ರ ಸರ್ಕಾರದ ದಿಟ್ಟ ನಿರ್ದಾರ ಇಂತಹ ನಿರ್ದಾರಗಳು ಭಾರತದ ಅಭಿವೃದ್ಧಿಗೆ ಹೆಚ್ಚು ಅವಶ್ಯಕ ಎಂದು ನುಡಿದರು.

ಕೇಂದ್ರ ಸರ್ಕಾರದ ಕಾರ್ಯವನ್ನು ನಾವಿಂದು ಪ್ರಶಂಸಿಸಬೇಕಿದ್ದು, 73 ವರ್ಷದ ನಂತರ ಇಂತಹ ನಡೆಗಳು ಐತಿಹಾಸಿಕವಾಗಿ ನಿಲ್ಲಲಿವೆ ಎಂದು ತಿಳಿಸಿದರು.

ನೆರೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಶಾಲ  ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos