ʼರಾಜ್ʼ ಮೊಮ್ಮಗನಿಗೆ ʼಅರಶಿಣʼ ಶಾಸ್ತ್ರ!

ʼರಾಜ್ʼ ಮೊಮ್ಮಗನಿಗೆ ʼಅರಶಿಣʼ ಶಾಸ್ತ್ರ!

ಚಾಮರಾಜನಗರ , ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ನಟಸಾರ್ವಭೌಮ ಡಾ.ರಾಜ್‌ಕುಮಾರ್ ಮನೆಯಲ್ಲೀಗ ಮದುವೆ ಸಂಭ್ರಮ.
ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ವಿನಯ್ ರಾಜ್‌ಕುಮಾರ್  ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೇ ತಿಂಗಳ 25, 26ರಂದು ಮದುವೆ ಕಾರ್ಯ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದ್ದು, ವಿವಾಹಪೂರ್ವ ಅರಿಶಿನ ಶಾಸ್ತ್ರ ನೆರವೇರಿಸಲು ದೊಡ್ಮನೆ ಕುಟುಂಬ ಡಾ.ರಾಜ್ ಹುಟ್ಟೂರಾದ ಚಾಮರಾಜನಗರದ ತಾಳವಾಡಿ ಸಮೀಪದ ಗಾಜನೂರಿಗೆ ಆಗಮಿಸಿದೆ. ಹಲವಾರು ಸ್ನೇಹಿತರು , ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಅರಿಶಿನ ಶಾಸ್ತ್ರ ನೆರವೇರಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos