ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ರಾಹುಲ್ ?

ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ರಾಹುಲ್ ?

ನವದೆಹಲಿ,ಜೂ. 26 : ಬೇರೆ ಯಾರನ್ನಾದರೂ ಹುಡುಕಿ, ಅಧ್ಯಕ್ಷರು ಗಾಂಧಿ ಕುಟುಂಬದವರೇ ಆಗಬೇಕು ಎಂದೇನಿಲ್ಲ ಎಂದು ಈಗಾಗಲೇ ತಮ್ಮ ನಿರ್ಧಾರವನ್ನು ತಿಳಿಸಿರುವ ರಾಹುಲ್​, ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಆದರೆ ರಾಹುಲ್​ ಗಾಂಧಿ ಯಾರ ಮಾತಿಗೂ ಒಪ್ಪಿಗೆ ನೀಡಲಿಲ್ಲ ಎನ್ನಲಾಗಿದೆ. ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅದನ್ನು ಚರ್ಚೆ ಮಾಡಲು ಈ ಸಭೆ ವೇದಿಕೆಯೂ ಅಲ್ಲ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಕಾಂಗ್ರೆಸ್​ ಕಾರ್ಯಕಾರಿಣಿಗೆ ತಿಳಿಸಿದ್ದೇನೆ. ಅದಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಬಂದು ಬಿಜೆಪಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೇರಿ ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿದ ದಿನವೇ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಾವು ಅಧ್ಯಕ್ಷಸ್ಥಾನದಿಂದ ಇಳಿಯುವುದಾಗಿ ಹೇಳಿದ್ದಾರೆ.

ಇಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ, ಕಾಂಗ್ರೆಸ್​ನ ಸಂಸದರು, ಶಾಸಕರು ಸೇರಿ ಹಲವರು ರಾಹುಲ್​ ಗಾಂಧಿಯವರ ಬಳಿ ಅಧ್ಯಕ್ಷ ಸ್ಥಾನ ತೊರೆಯದಿರುವಂತೆ ಮನವಿ ಮಾಡಿ ಒತ್ತಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos