ರಾಹುಲ್ ಗಾಂಧಿಗೆ ಮತ್ತೆ ನಾಗರಿಕತ್ವದ ಸಂಕಟ.!

ರಾಹುಲ್ ಗಾಂಧಿಗೆ ಮತ್ತೆ ನಾಗರಿಕತ್ವದ ಸಂಕಟ.!

ನವದೆಹಲಿ, . 30, ನ್ಯೂಸ್ ಎಕ್ಸ್ ಪ್ರೆಸ್: ರಾಹುಲ್ ಗಾಂಧಿ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಅವರಿಗೆ ನೋಟೀಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾರೀ ಹಿನ್ನಡೆ ಉಂಟಾಗಿದೆ.

ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ದೂರಿನ ಮೇರೆಗೆ ಗೃಹ ಸಚಿವಾಲಯ ನೋಟೀಸ್ ಜಾರಿಗೊಳಿಸಿದ್ದು, ಅವರ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆದೇಶಿಸಿದೆ.

ಇಂಗ್ಲೆಂಡ್ ನಲ್ಲಿ 2003 ರಲ್ಲಿಬ್ಯಾಕಾಪ್ಸ್ ಲಿ. ಎಂಬ ಹೆಸರಿನಲ್ಲಿ ಕಂಪನಿಯೊಂದನ್ನು ರಿಜಿಸ್ಟರ್ ಮಾಡಲಾಗಿದೆ. ಆ ಕಂಪನಿಗೆ ನೀವು ಸಹ ಒಬ್ಬ ನಿರ್ದೇಶಕರು ಮತ್ತು ಕಾರ್ಯದರ್ಶಿ. ನೀವು ಕಂಫನಿಗೆ ನೀಡಿದ ಜನ್ಮ ವವರದಲ್ಲಿ ನಿಮ್ಮ ರಾಷ್ಟ್ರೀಯತೆಯನ್ನು ‘ಬ್ರಿಟಿಶ್’ ಎಂದು ಘೋಷಿಸಿದ್ದೀರಿ. 17/02/2009 ರ ಈ ಕಂಪನಿಯ ದಾಖಲೆಗಳಲ್ಲೂ ನಿಮ್ಮದು ಬ್ರಿಟಿಶ್ ನಾಗರಿಕತ್ವ ಎಂದೇ ಉಲ್ಲೇಖಿಸಲಾಗಿದೆ. ಈ ಕುರಿತು 2 ವಾರಗಳೊಳಗೆ ಸ್ಪಷ್ಟೀಕರಣ ನೀಡಿ” ಎಂದು ಗೃಹ ಸಚಿವಾಲಯ ಆದೇಶಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos