ನಿದ್ದೆಗೆ ಬ್ರ್ಯಾಂಡ್ ಅಂಬಾಸಿಡರ್ ಸಿದ್ದರಾಮಯ್ಯ ಆರ್‌ ಅಶೋಕ್‌ ಟಾಂಗ್!‌

ನಿದ್ದೆಗೆ ಬ್ರ್ಯಾಂಡ್ ಅಂಬಾಸಿಡರ್ ಸಿದ್ದರಾಮಯ್ಯ ಆರ್‌ ಅಶೋಕ್‌ ಟಾಂಗ್!‌

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರ್ಯಾಂಡ್ ಮಾಡುತ್ತಾರೆ ನೋಡಿ ಎಂದು ಕೌಂಟರ್ ಕೊಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಪ್ರಧಾನಿ ನಿದ್ದೆ ಮಾಡ್ತಿರುವ ಒಂದು ದಾಖಲೆ ಕೊಡಿ. ಸಿದ್ದರಾಮಯ್ಯ ಮಲಗಿರೋದಕ್ಕೆ ಸಾಕ್ಷಿ ಇದೆ. ಇತರರು ಬಂದು ಎದ್ದೇಳಣ್ಣೋ ಸಿದ್ರಾಮಣ್ಣ ಅಂತಾ ಎಚ್ಚರಿಸಿದ್ದಾರೆ. ಮೋದಿ ಹಾಗೇ ಮಲಗಿರೋದು ಒಂದು ಫೋಟೋ ತೋರಿಸಿ ಎಂದಿದ್ದಾರೆ.

ಕೆಳ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ನಿದ್ದೆಯಲ್ಲಿರುವ ಫೋಟೋ ಹಾಕಿ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಸರ್ಕಾರ ಇನ್ನು ನಿದ್ದೆಯಲ್ಲಿದೆ. ಇದು ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಕಿಡಿ ಕಾರಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಕಾಡ ನಿದ್ರೆ ಕರ್ನಾಟಕದ ಅಭಿವೃದ್ಧಿ ಗದೇ ಪ್ರಮುಖ ತೊಂದ್ರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿ ಎಂ ಟೀಕೆ ಗೆ ಇದೀಗ ವಿಪಕ್ಷ ನಾಯಕ  ಆರ್‌ ಆಶೋಕ್‌ ಟಾಂಗ್‌ ನೀಡಿದ್ದಾರೆ.

ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು ಇದೆಲ್ಲವೂ ಸಿದ್ದರಾಮಯ್ಯನವರಿಗೆ ಚೆನ್ನಾಗಿಯೇ ಸಿದ್ದಿಸಿದೆ.  ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರಾಂಡ್ ಮಾಡುತ್ತಾರೆ ಎಂದು ಟೀಕಿಸಿದ್ದಾರೆ. ನಿದ್ದೆರಾಮಯ್ಯ ತಾಯಿ ಅಂತಾನೆ ನಿಮಗೆ ಹೆಸರಿದೆ ನಿದ್ದೆ ಮಾಡುವುದಕ್ಕೆ ನೀವೇ ಪ್ಲಾನ್ ಅಂಬಾಸಿಡರ್ ಜನ ಮುಂದೆ ನಿಮ್ಮನ್ನು ನಿದ್ದೆಗೆ ಬ್ರಾಂಡ್ ಮಾಡುತ್ತಾರೆ ನೋಡಿ ಎಂದು ಟಾಂಗ್ ನೀಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos